ವಿಧಾನಸಭೆಯ ಸಮಿತಿಗಳಿಗೆ ಶಾಸಕರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Koliwad

ಬೆಂಗಳೂರು, ಆ.28-ವಿಧಾನಸಭೆಯ ವಿವಿಧ 7 ಸಮಿತಿಗಳಿಗೆ 9 ಶಾಸಕರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಶಾಸಕರನ್ನು ವಿಧಾನಸಭೆಯ ಸಮಿತಿಗಳಿಗೆ ಮರು ನಾಮನಿರ್ದೇಶನ ಮಾಡಿದ್ದಾರೆ. ಅಂದಾಜುಗಳ ಸಮಿತಿಗೆ ಜಿ.ಟಿ.ಪಾಟೀಲ, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಗೆ ಶಾಮನೂರು ಶಿವಶಂಕರಪ್ಪ , ಎಂ.ಎಚ್. ಅಂಬರೀಷ್, ಎ.ಎಸ್.ಪಾಟೀಲ್ ನಡಹಳ್ಳಿ, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ರಾಜ್ ಸಮಿತಿಗೆ ಎನ್.ವೈ.ಗೋಪಾಲಕೃಷ್ಣ , ಅರ್ಜಿಗಳ ಸಮಿತಿಗೆ ಕೆ.ಎಸ್.ಮಂಜುನಾಥ ಗೌಡ, ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ ಡಾ.ಶಿವರಾಜ್ ಪಾಟೀಲ್, ವಸತಿ ಸಮಿತಿಗೆ ಎಸ್.ಎನ್.ಸುಬ್ಬಾರೆಡ್ಡಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಎಚ್.ಪಿ.ರಾಜೇಶ್ ಅವರನ್ನು ಮರು ನಾಮಕರಣ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin