ವಿಧಾನಸಭೆ ಪತ್ರಕರ್ತರ ಗ್ಯಾಲರಿಯಲ್ಲಿ ಸಂಸದರು

ಈ ಸುದ್ದಿಯನ್ನು ಶೇರ್ ಮಾಡಿ

Gallry
ಬೆಂಗಳೂರು, ಸೆ.23- ಇಂದು ನಡೆದ ಐತಿಹಾಸಿಕ ಅಧಿವೇಶನ ವನ್ನು ಸಂಸದರು, ರಾಜ್ಯಸಭಾ ಸದಸ್ಯರು, ಪತ್ರಕರ್ತರ ಗ್ಯಾಲರಿ ಹಾಗೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕುತೂಹಲದಿಂದ ವೀಕ್ಷಿಸಿದರು.ಕಾವೇರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂದು ನಡೆದ ವಿಶೇಷ ಅಧಿವೇಶನ ಸಂದರ್ಭದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಕಾರಣ ಬಹುತೇಕ ಸಂಸದರು, ರಾಜ್ಯಸಭಾ ಸದಸ್ಯರು ಸದನಕ್ಕೆ ಆಗಮಿಸಿ ಕಲಾಪವನ್ನು ವೀಕ್ಷಿಸಿದರು.  ರಾಜ್ಯಸಭಾ ಸದಸ್ಯರಾದ ಕೆ.ಸಿ.ರಾಮಮೂರ್ತಿ, ಪ್ರೊ ರ.ಕೆ.ರಾಜೀವ್‍ಗೌಡ, ಸಂಸದರಾದ ಧೃವನಾರಾಯಣ್, ಭಗವಾನ್ ಕೂಬ, ಡಿ.ಕೆ.ಸುರೇಶ್, ಮುದ್ದಹನುಮೇಗೌಡ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತು ಕಲಾಪವನ್ನು ವೀಕ್ಷಿಸಿದರೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾಜಿ ಸಂಸದ ಎಚ್.ವಿಶ್ವನಾಥ್, ರಾಜ್ಯಸಭಾ ಮಾಜಿ ಸದಸ್ಯ ಎಂ.ವಿ.ರಾಜಶೇಖರನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಸಿ.ನಾಣಯ್ಯ, ಮಾಜಿ ಶಾಸಕರಾದ ಪುಟ್ಟೇಗೌಡ, ವಿಶ್ವನಾಥ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಕುಳಿತು ಕಲಾಪ ವೀಕ್ಷಿಸಿದರು.

 

► Follow us on –  Facebook / Twitter  / Google+

 

Facebook Comments

Sri Raghav

Admin