ವಿಧಾನಸೌಧಕ್ಕೆ ಆಸ್ಟ್ರೇಲಿಯಾದ ಸಂಸತ್ ನಿಯೋಗ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Australia--02

ಬೆಂಗಳೂರು,ಡಿ.6-ಆಸ್ಟ್ರೇಲಿಯಾದ ವಿಕ್ಟೋರಿಯಾ ಸಂಸತ್‍ನ ನಿಯೋಗ ಇಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ವಿಕ್ಟೋರಿಯಾ ಸಂಸತ್‍ನ ಸ್ಪೀಕರ್ ಕೊಲೀನ್ ಬ್ರೂಕ್ಸ್ ನೇತೃತ್ವದ ಐದು ಮಂದಿಯ ಸಂಸದರ ನಿಯೋಗ ಸ್ಪೀಕರ್ ಅವರನ್ನು ಭೇಟಿ ಮಾಡಿ ಇಲ್ಲಿನ ಶಾಸನ ಸಭೆಗಳ ನಡವಳಿಕೆಗಳು, ಎಷ್ಟು ದಿನ ಅಧಿವೇಶನ ನಡೆಯುತ್ತದೆ, ಸರ್ಕಾರ ನೀಡುವ ಭರವಸೆಗಳ ಈಡೇರಿಕೆ, ಅಧಿವೇಶನದ ಕಾರ್ಯಕಲಾಪದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.

ವಿಧಾನಸಭೆ ಮತ್ತು ವಿಧಾನಪರಿಷತ್‍ನ ಸಭಾಂಗಣ ಹಾಗೂ ವಿಧಾನಸೌಧ ವನ್ನು ಆಸ್ಟ್ರೇಲಿಯದ ವಿಕ್ಟೋರಿಯಾ ಸಂಸತ್‍ನ ನಿಯೋಗ ವೀಕ್ಷಿಸಿ ಸಂತಸ ವ್ಯಕ್ತಪಡಿಸಿ ಹಿಂದಿರುಗಿತು. ಈ ವೇಳೆ ಮಾತನಾಡಿದ ಕೋಳಿವಾಡ ಅವರು, ರಾಜ್ಯ ಪ್ರವಾಸಕ್ಕಾಗಿ ಆಗಮಿಸಿರುವ ಆಸ್ಟ್ರೇಲಿಯಾ ಸಂಸತ್‍ನ ನಿಯೋಗ ಅವರ ಅಲ್ಲಿನ ಸಭೆಗಳ ನಡವಳಿಕೆ, ಕಾರ್ಯ ಕಲಾಪಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಇದೊಂದು ಸೌಜನ್ಯದ ಭೇಟಿಯಾಗಿತ್ತು ಎಂದು ಹೇಳಿದರು.

Facebook Comments

Sri Raghav

Admin