ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪನೆಯಾಗಲಿದೆ ವಿಶ್ವದ ಆದಿಕವಿ ವಾಲ್ಮೀಕಿಯ ಮೂರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Valmiki-Kavi

ಬೆಂಗಳೂರು, ಫೆ.17– ವಿಧಾನಸೌಧದ ಆವರಣದಲ್ಲಿ ಅತಿ ಎತ್ತರದ ಆದಿಕವಿ ವಾಲ್ಮೀಕಯ ಮೂರ್ತಿ ಪ್ರತಿಷ್ಠಾಪಿಸಲು ಸರ್ಕಾರ ಮುಂದಾಗಿದೆ. ವಿಧಾನಸೌಧ ಮತ್ತು ಶಾಸಕರ ಭವನದ ಮಧ್ಯೆ ವಾಲ್ಮೀಕಿ ತಪೋವನ ನಿರ್ಮಿಸಲಾಗಿದ್ದು, ಇಲ್ಲಿ 22 ಅಡಿ ಎತ್ತರದ, 25 ಟನ್ ತೂಕದ ವಾಲ್ಮೀಕಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಇದರ ಸುತ್ತ 3 ಎಕರೆ ಜಾಗದಲ್ಲಿ ವಾಲ್ಮೀಕಿ ತಪೋವನ ನಿರ್ಮಿಸಲು ಕ್ರಮ ಜರುಗಿಸಲಾಗಿದೆ.  ತಮಿಳುನಾಡಿನ ಮಹಾಬಲಿಪುರಂನಲ್ಲಿ ಏಕಶಿಲೆಯಲ್ಲಿ ವಾಲ್ಮೀಕಿ ಮೂರ್ತಿ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ವಿಶ್ವದಲ್ಲೇ ಅತಿ ಎತ್ತರದ ವಾಲ್ಮೀಕಿ ಮೂರ್ತಿ ಎಂಬ ಕೀರ್ತಿಗೆ ಇದು ಪಾತ್ರವಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin