ವಿಧಾನಸೌಧದ ವಜ್ರಮಹೋತ್ಸವಕ್ಕೆ ಪಾಪು ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

Patil-Puttappa-01

ಬೆಂಗಳೂರು, ಅ. 16- ರಾಜ್ಯದಲ್ಲಿ ಜನರು ಬರಗಾಲದ ಹಾವಳಿಯಿಂದ ತತ್ತರಿಸಿದ್ದಾರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಸರಿಯಿಲ್ಲದ ಸಂದರ್ಭದಲ್ಲಿ ವಿಧಾನಸೌಧದ ವಜ್ರಮೋಹತ್ಸವದ ಅಗತ್ಯತೆಯನ್ನು ಸಾಹಿತಿ ಪಾಟೀಲ್ ಪುಟ್ಟಪ್ಪ ಪ್ರಶ್ನಿಸಿದ್ದಾರೆ.  ಸಂಕಷ್ಟದ ಸಂದರ್ಭದಲ್ಲಿ ವಿಧಾನಸೌಧದ ವಜ್ರಮಹೋತ್ಸವ ಆಚರಣೆ ಮಾಡಲು 2 ದಿನಗಳ ಶ್ರೀಮಂತ ಕಾರ್ಯಕ್ರಮವನ್ನು ಇರಿಸಿಕೊಂಡಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ.  ದುಡ್ಡು ಹೇಗೆ ಖರ್ಚು ಮಾಡಬೇಕೆನ್ನುವ ಕಾರ್ಯಕ್ರಮ ಒಂದೇ ಇವರಿಗೆ ಕಾಣುತ್ತದೆ.

ಜನರ ಕಷ್ಟಗಳನ್ನು ನಿವಾರಣೆ ಮಾಡಿ ಅವರನ್ನು ಸುಖದಿಂದ ಇರಿಸಬೇಕೆನ್ನುವ ಚಿಂತೆಯನ್ನು ಮಾಡದೇ ಬೆಳ್ಳಿ, ಬಂಗಾರ ಕೊಟ್ಟು ಅದ್ದೂರಿಯಾದ ಶ್ರೀಮಂತ ಭೋಜನವನ್ನು ಏರ್ಪಡಿಸಿ, ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುವುದು ಖಂಡನೀಯ.
ಇವರಿಗೆ ಬುದ್ಧಿ ಹೇಳುವವರು ಯಾರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ದುಂದು ವೆಚ್ಚಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Facebook Comments

Sri Raghav

Admin