ವಿಧಾನಸೌಧ ಸುತ್ತಮುತ್ತ ಜಾಹಿರಾತು ನಿಷೇಧ : ನಿಯಮ ಮೀರಿದರೆ ಕ್ರಿಮಿನಲ್ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha

ಬೆಂಗಳೂರು, ಡಿ.25- ಇನ್ನು ಮುಂದೆ ಶಕ್ತಿ ಕೇಂದ್ರ ವಿಧಾನಸೌಧದ ಸುತ್ತಮುತ್ತ ಜಾಹಿರಾತು ಅಥವಾ ಭಿತ್ತಿಪತ್ರ ಪ್ರದರ್ಶಿಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಲಿದೆ.  ಹೌದು ! ಜಾಹೀರಾತು ಬೈಲ ಉಪವಿಧಿಗಳ ಪ್ರಕಾರ ಬಿಬಿಎಂಪಿ ಎ ವಲಯಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ನಿಯಮಕ್ಕೆ ವಿರುದ್ಧವಾಗಿ ಎ ವಲಯಗಳಲ್ಲಿ ಪ್ಲೆಕ್ಸ್ ಅಥವಾ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರೆ ಅಂತಹವರ ವಿರುದ್ಧ ಕೆಎಂಸಿ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಫ್‍ಐಆರ್ ಹಾಕಲಾಗುವುದು.

ಹೀಗಾಗಿ ಎ ವಲಯಗಳೆಂದು ಗುರುತಿಸಲ್ಪಟ್ಟಿರುವ ಕುಮಾರಕೃಪಾ ರಸ್ತೆ (ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದದವರೆಗೆ), ರಾಜಭವನ ರಸ್ತೆ (ಹೈಗ್ರೌಂಡ್ಸ್‍ನಿಂದ ಮಿನ್ಸ್ ರಸ್ತೆ), ಅಂಬೇಡ್ಕರ್ ಬೀದಿ ( ಕೆ.ಆರ್.ವೃತ್ತದಿಂದ ಇನ್‍ಫೆಂಟ್ರಿ ಜಂಕ್ಷನ್), ಪೋಸ್ಟ್ ಆಫೀಸ್ ರಸ್ತೆ (ಕೆ.ಆರ್.ವೃತ್ತದಿಂದ ಎಸ್‍ಬಿಎಂ ವೃತ್ತ), ಚಾಲುಕ್ಯ ವೃತ್ತ, ಮಹಾತ್ಮಾಗಾಂಧಿ ರಸ್ತೆ, ಕೆ.ಆರ್.ಸರ್ಕಲ್, ಕಬ್ಬನ್‍ಪಾರ್ಕ್, ನೃಪತುಂಗಾ ರಸ್ತೆ, ಪ್ಯಾಲೆಸ್‍ರಸ್ತೆ.
ಸಾರ್ವಜನಿಕರು ಎ ವಲಯಗಳೆಂದು ಗುರುತಿಸಿರುವ ಈ ಪ್ರದೇಶಗಳಲ್ಲಿ ಯಾವುದೇ ರೀತಿಯ ಅನಧಿಕೃತ ಜಾಹಿರಾತು ಅಥವಾ ಭಿತ್ತಿಪತ್ರಗಳನ್ನು ಪ್ರದರ್ಶಿಸಬಾರದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ರಾಜಕೀಯ ಗಾಡ್ ಫಾದರ್‍ಗಳ ಗಮನ ಸೆಳೆಯಲು ಕೆಲವರು ವಿಧಾನಸೌಧದ ಸುತ್ತಮುತ್ತ ಆಳುದ್ದದ ಕಟೌಟ್‍ಗಳನ್ನು ನಿಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ನಗರದ ಸೌಂದರ್ಯ ಹಾಳಾಗುವುದರ ಜತೆಗೆ ಅಪಘಾತಗಳು ಹೆಚ್ಚಾಗುತ್ತಿದ್ದವು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin