ವಿಪಕ್ಷ ಪ್ರತಿಭಟನೆ ನಡುವೆ ಹಲವು ನಿರ್ಣಯಗಳ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

BBMP-02

ಬೆಂಗಳೂರು, ಆ.9- ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ವಿರೋಧದ ನಡುವೆಯೇ ಪಾಲಿಕೆ ಸಭೆಗೆ  ಮಾರ್ಷಲ್ಗಳ ನೇಮಕ ಸೇರಿದಂತೆ ಹಲವಾರು ನಿರ್ಣಯಗಳಿಗೆ ಅಂಗೀಕಾರ ಪಡೆಯಲಾಯಿತು. ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ್  ಅವರು ಕೌನ್ಸಿಲ್ಗೆ ಮಾರ್ಷಲ್ಗಳನ್ನು  ನೇಮಕ ಮಾಡಿಕೊಳ್ಳುವ ವಿಷಯ ಪ್ರಸ್ತಾಪಿಸಿದರು.  ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಕೌನ್ಸಿಲ್ ಸಭೆಗೆ ಮಾರ್ಷಲ್ಗಳ ನೇಮಕ ಏಕೆ? ನಾವೇನು ಟೆರರಿಸ್ಟಗಳಾ? ಇದರ ಬಗ್ಗೆ ಚರ್ಚೆಯಾಗಲಿ ಎಂದು ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಿದ ಮೇಯರ್ ವಿಧಾನಮಂಡಲದಲ್ಲಿ  ಮಾರ್ಷಲ್ಗಳಿದ್ದಾರೆ ಹಾಗಾದರೆ ಶಾಸಕರು ಟೆರರಿಸ್ಟ್ಗಳಾ ಎಂದು ಸವಾಲು ಹಾಕಿದರು.  ಇದಕ್ಕೆ ಪದ್ಮನಾಭರೆಡ್ಡಿ ಪ್ರತಿಕ್ರಿಯಿಸಿ, ಕೆಎಂಸಿ ಕಾಯ್ದೆಯಡಿ ಮಾರ್ಷಲ್ಗಳ ನೇಮಕಕ್ಕೆ ಅವಕಾಶ ಇಲ್ಲ. ಪೊಲೀಸರು ಪಾಲಿಕೆಸಭೆ ಪ್ರವೇಶಿಸಲು ಅವಕಾಶ ಇಲ್ಲ. ನೀವು ದುಡುಕಿ ನಿರ್ಧಾರ ಕೈಗೊಳ್ಳಬೇಡಿ. ಮಾರ್ಷಲ್ಗಳು ಬೇಕೆ-ಬೇಡವೇ ಎಂಬ ಬಗ್ಗೆ ಚರ್ಚೆಯಾಗಲಿ. ಅನಂತರ ತೀರ್ಮಾನ ಮಾಡಿ ಎಂದು ಸಲಹೆ ನೀಡಿದರು.

ಇದಕ್ಕೆ ಮೇಯರ್ ಮಾತನಾಡಿ, ಕಳೆದ ಬಾರಿ ಪಾಲಿಕೆ ಸಭೆಯಲ್ಲಿ ಏನೆನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನೀವು ಪ್ರತಿಪಕ್ಷದವರು. ಹದ್ದುಮೀರಿ ವರ್ತಿಸುತ್ತಿದ್ದೀರಿ. 198 ಸದಸ್ಯರ ಹಿತರಕ್ಷಣೆಯಿಂದ ಮಾರ್ಷಲ್ಗಳ ನೇಮಕ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.  ಇದನ್ನು ತೀವ್ರವಾಗಿ ವಿರೋಧಿಸಿದ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತಿನ ಚಕಮಕಿ, ವಾದ-ವಿವಾದ ನಡೆಯಿತು. ಇದರ ನಡುವೆಯೇ ಮಾರ್ಷಲ್ಗಳ ನೇಮಕವೂ ಸೇರಿದಂತೆ ನೂರಾರು ನಿರ್ಣಯಗಳಿಗೆ ಅನುಮತಿ ಪಡೆಯಲಾಯಿತು.
ಮೇಯರ್ ರಾಜೀನಾಮೆ ನೀಡಲಿ:
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಪದ್ಮನಾಭರೆಡ್ಡಿ, ಮೇಯರ್ ಅವರು ಕಾನೂನು ಮೀರಿ ವರ್ತಿಸುತ್ತಿದ್ದಾರೆ. ಅವರನ್ನು ಪೂಜ್ಯ ಮಹಾಪೌರರು ಎಂದು ಕರೆಯಲು ಅಸಹ್ಯವಾಗುತ್ತದೆ. ಈ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನಡೆದ ಸಭೆಯ ನಡಾವಳಿಗಳನ್ನು ತರಿಸಿಕೊಂಡು ಆಡಳಿತ ಪಕ್ಷದ ಸದಸ್ಯರ ವರ್ತನೆಯನ್ನು ಪರಾಮರ್ಷೆ ಮಾಡಬೇಕು. ಕೂಡಲೇ ಮಧ್ಯ ಪ್ರವೇಶಿಸಿ ಕಾನೂನು ಬಾಹೀರ ನಿರ್ಣಯಗಳಿಗೆ ನೀಡಿರುವ ಅನುಮೋದನೆಗಳಿಗೆ ತಡೆನೀಡಬೇಕೆಂದು ಒತ್ತಾಯಿಸಿದರು.

Facebook Comments

Sri Raghav

Admin