ವಿಪತ್ತುಗಳನ್ನು ಹತ್ತಿಕ್ಕಲು ಮಿನಿ ರಕ್ಷಣಾ ವಾಹನ

ಈ ಸುದ್ದಿಯನ್ನು ಶೇರ್ ಮಾಡಿ

ramanagara
ರಾಮನಗರ, ಅ.16- ನೈಸರ್ಗಿಕ ಅಥವಾ ಮಾನವನಿಂದ ಸಂಭವಿಸುವ ವಿಪತ್ತುಗಳನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಸುಸಜ್ಜಿತ ಮಿನಿ ರಕ್ಷಣಾ ವಾಹನವನ್ನು ಖರೀದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ ಹೇಳಿದರು. ನಗರದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಆವರಣದಲ್ಲಿ ನೂತನವಾಗಿ ಖರೀದಿಸಲಾದ ಮಿನಿ ರಕ್ಷಣಾ ವಾಹನವನ್ನು ಪರಿಶೀಲಿಸಿ, ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ತುರ್ತು ಸೇವೆಗಳನ್ನು ಒದಗಿಸಲು ಈ ರೀತಿಯ ವಾಹನದ ಅವಶ್ಯಕತೆ ಇದ್ದು, ವಿವಿಧ ರೀತಿಯ ವಿಪತ್ತುಗಳನ್ನು ಎದುರಿಸಲು ವಾಹನ ಶ್ಯಕ್ತವಾಗಿದೆ. ವಾಹನದ ಮುಂಭಾಗದಲ್ಲಿ ಕ್ರೇನ್ ವ್ಯವಸ್ಥೆ ಇದ್ದು, ಅದನ್ನು ರಿಮೋಟ್ ಕಂಟ್ರೋಲ್ ಮೂಲಕ ಚಲಾಯಿಸಬಹುದಾಗಿದೆ, ನೀರಿನಲ್ಲಿ ಬಿದ್ದ ಅಥವಾ ಕೆಟ್ಟು ನಿಂತ ವಾಹನಗಳನ್ನು ಎಳೆಯಬಲ್ಲದಾಗಿದೆ ಎಂದು ಅವರು ವಿವರಿಸಿದರು.

ಅಲ್ಲದೆ ನೀರು ಹಾಗೂ ಅವಶೇಷಗಳಡಿ ಮಾನವನನ್ನು ಗುರುತು ಹಿಡಿದು ಹೊರತರುವ ವಿಕ್ಟಿಮ್ ಲೋಕೆಷನ್ ಕ್ಯಾಮರಾ ಸೇರಿದಂತೆ ಹಲವಾರು ವೈಶಿಷ್ಟ್ಯಗಳು ಈ ವಾಹನದಲ್ಲಿವೆ ಎಂದವರು ಹೇಳಿದರು. ಇದೇ ಸಂದರ್ಭದಲ್ಲಿ ಸಣ್ಣಪುಟ್ಟ ಅಗ್ನಿ ಅವಘಡಗಳನ್ನು ಹತ್ತಿಕ್ಕುವ ಸಾಮಥ್ರ್ಯವುಳ್ಳ ಅಗ್ನಿ ಮೋಟಾರ್ ಬೈಕ್ ಅಗ್ನಿಶಾಮಕವನ್ನು ಜಿಲ್ಲಾಧಿಕಾರಿಯವರು ವೀಕ್ಷಿಸಿದರು. ಅಗ್ನಿಯು ನೀರು ಮತ್ತು ಫೂಮ್‍ಯಹುಕ್ತ ಎರಡು ಸಿಲಿಂಡರ್‍ಗಳನ್ನು ಹೊಂದಿದ್ದು, ಅತಿ ಇಕ್ಕಟ್ಟಾದ ಸ್ಥಳದಲ್ಲಿಯೂ ಕೂಡ ಎರಡು ಸಿಬ್ಬಂದಿಗಳೊಂದಿಗೆ ಸಂಚರಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತದೆ. ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಬಿ. ಮಂಜುನಾಥ್, ರಾಮನಗರ ತಾಲ್ಲೂಕಿನ ಅಗ್ನಿಶಾಮಕ ಅಧಿಕಾರಿ ರಾಜೇಂದ್ರ ಸಿಂಗ್, ಚಾಲಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Facebook Comments

Sri Raghav

Admin