ವಿಪ್ ಉಲ್ಲಂಘಿಸಿದ ಜೆಡಿಎಸ್ ಶಾಸಕರನ್ನು ಪಕ್ಷ ಉಚ್ಚಾಟಿಸಬಹುದೇ ಹೊರತು ಅನರ್ಹಗೊಳಿಸಲಾಗಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

JDS-mla

ಬೆಂಗಳೂರು, ಅ.27-ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದ ಜೆಡಿಎಸ್‍ನ ಎಂಟು ಮಂದಿ ಶಾಸಕರನ್ನು ಅನರ್ಹಗೊಳಿಸಲು ಬರುವುದಿಲ್ಲ ಎಂದು ಈ ಶಾಸಕರ ಪರ ವಕೀಲರು ಇಂದು ಆಕ್ಷೇಪಣೆ ಸಲ್ಲಿಸಿದರು. ಅರೆನ್ಯಾಯಿಕ ಪ್ರಾಧಿಕಾರದ ಮುಂದೆ ಶಾಸಕರ ಪರ ವಕೀಲ ರಾಜ್‍ಗೋಪಾಲ್, ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದಿಂದ ಈ ಶಾಸಕರನ್ನು ಉಚ್ಚಾಟಿಸಬಹುದೇ ಹೊರತು ಅನರ್ಹಗೊಳಿಸಲು ಬರುವುದಿಲ್ಲ. ಎಂದು ವಿಚಾರಣೆ ವೇಳೆ ತಿಳಿಸಿದರು. ಇವರ ಆಕ್ಷೇಪಣೆ ಆಲಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ ಇದರ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿದರು. ಇಂದು ನಡೆದ ಅರೆನ್ಯಾಯಿಕ ಪ್ರಾಧಿಕಾರದ ವಿಚಾರಣೆಗೆ ಶಾಸಕರು ಗೈರು ಹಾಜರಾಗಿದ್ದರು. ಅವರ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin