ವಿಮಾನದಲ್ಲಿ ನಗ್ನನಾಗಿ ಗಗನಸಖಿಯರನ್ನು ಪೇಚಿಗೆ ಸಿಲುಕಿಸಿದ..!

ಈ ಸುದ್ದಿಯನ್ನು ಶೇರ್ ಮಾಡಿ

Indigo01

ನವದೆಹಲಿ, ಅ.12– ವಿಮಾನದಲ್ಲಿ ಸಂಪೂರ್ಣ ನಗ್ನನಾಗಿ ಗಗನಸಖಿಯರು ಮತ್ತು ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಭುವನೇಶ್ವರ್-ನವದೆಹಲಿ ಮಾರ್ಗದ ಇಂಡಿಗೋ ಏರ್‍ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯಕ್ಕೆ ಹೋಗಿ ಸಂಪೂರ್ಣ ಬೆತ್ತಲಾದ. ನಂತರ ಸಹಾಯ ಕೋರಿ ಅಲ್ಲಿನ ಸಹಾಯವಾಣಿ ಗುಂಡಿ ಒತ್ತಿದ. ತಕ್ಷಣ ಶೌಚಾಲಯಕ್ಕೆ ಆಗಮಿಸಿದ ಗಗನಸಖಿಯರು ಈತನ ಅವಾಂತರ ನೋಡಿದ್ದಾರೆ. ಬಟ್ಟೆ ಧರಿಸುವಂತೆ ಸಲಹೆ ಮಾಡಿದರು. ಆದರೆ, ಈ ಮೊಂಡು ವ್ಯಕ್ತಿ ಕೆಲಕಾಲ ಏರ್‍ಹೋಸ್ಟೇಸ್ ಮತ್ತು ಸಹ ಪ್ರಯಾಣಿಕರಿಗೆ ತೊಂದರೆ ನೀಡಿ ರಾದ್ಧಾಂತ ಮಾಡಿದ.

ಈ ಬಗ್ಗೆ ಗಗನಸಖಿಯರು ವಿಮಾನದ ಕ್ಯಾಪ್ಟನ್‍ಗೆ ದೂರು ನೀಡಿದ್ದರು. ವಿಮಾನ ಭೂಸ್ಪರ್ಶ ಮಾಡಿದ ನಂತರ ಈ ಮಹಾನುಭಾವನನ್ನು ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿತು.

► Follow us on –  Facebook / Twitter  / Google+

Facebook Comments

Sri Raghav

Admin