ವಿಮಾನದಲ್ಲಿ ಬೆಂಕಿ : ಪೈಲಟ್‍ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾವುತ

ಈ ಸುದ್ದಿಯನ್ನು ಶೇರ್ ಮಾಡಿ

asdgfAGDGDGದುಬೈ: ತಿರುವನಂತಪುರದಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪೈಲಟ್‍ನ ಸಮಯ ಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದೆ. ದುಬೈ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಇಳಿಯುವಾಗ ತುರ್ತು ಭೂಸ್ಪರ್ಶ ಉಂಟಾಗಿತ್ತು. ಅದೃಷ್ಟವಶಾತ್ ವಿಮಾದಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯಾಹ್ನ 12.45ರ ಸಮಯದಲ್ಲಿ ಏಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಕೂಡಲೇ ವಿಮಾನವನ್ನು ಲ್ಯಾಂಡ್ ಮಾಡುವಾಗ ಸ್ಕೀಡ್ ಆಗಿ ವಿಮಾನ ಎಡಭಾಗದಲ್ಲಿ ಬೆಂಕಿ ಹುರಿಯತೊಡಗಿತ್ತು. ಒಳಗಡೆ ಇದ್ದ ಪ್ರಯಾಣಿಕರು ಕೂಡಲೇ ತೆರವುಗೊಳಿಸಿದರು. ವಿಮಾನವನ್ನು ಲ್ಯಾಂಡ್ ಆಗುವಾಗ ಸ್ಕೀಡ್ ಆಗಿ ತುರ್ತು ಭೂಸ್ಪರ್ಶವಾಯಿತು ಎಂದು ವಿಮಾನ ಚಾಲಕ ಹೇಳಿದರು.

Facebook Comments

Sri Raghav

Admin