ವಿಮಾನದಲ್ಲಿ ಲ್ಯಾಪ್‍ಟಾಪ್, ಐಪ್ಯಾಡ್, ಟ್ಯಾಬ್ಲೆಟ್ ಕೊಂಡೊಯ್ಯುವುದನ್ನು ನಿಷೇಧಿಸಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

Planes--01

ವಾಷಿಂಗ್ಟನ್, ಮಾ.21-ಕೆಲವು ದೇಶಗಳಿಂದ ಅಮೆರಿಕಾಗೆ ಪ್ರಯಾಣಿಸುವ ಮಂದಿ ಇನ್ನು ಮುಂದೆ ಲ್ಯಾಪ್‍ಟಾಪ್‍ಗಳು, ಟ್ಯಾಬ್ಲೆಟ್‍ಗೂ ಹಾಗೂ ಇತರ ಪುಟ್ಟ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಈ ಸಂಬಂಧ ನಿನ್ನೆಯಿಂದ ಹೊಸ ನಿಯಮವೊಂದು ಜಾರಿಗೆ ಬಂದಿದೆ.  ವಿಶೇಷವಾಗಿ ಮಧ್ಯಪ್ರಾಚ್ಯದ 10 ದೇಶಗಳ ಪ್ರಜೆಗಳು ಇಂಥ ಪೋರ್ಟಬಲ್ ಎಲೆಕ್ಟ್ರಾನಿಕ್ ವಸ್ತುಗಳನ್ನು  ವಿಮಾನದಲ್ಲಿ ಒಯ್ಯಲು ನಿರ್ಬಂಧಿಸಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಅಮೆರಿಕ ಅಧಿಕಾರಿಗಳು ಹೊರಡಿಸದಿದ್ದರೂ, ರಾಯಲ್ ಜೋರ್ಡಾನ್ ಏರ್‍ಲೈನ್ಸ್ ಟ್ವೀಟ್ ಮೂಲಕ ಈ ನಿಷೇಧದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ.

ಈಜಿಪ್ಟ್‍ನ ಕೈರೋ, ಜೋರ್ಡಾನ್‍ನ ಅಮ್ಮಾನ್, ಕುವೈತ್‍ನ ಕುವೈತ್ ನಗರ, ಕತಾರ್‍ನ ದೋಹಾ, ಸೌದಿ ಅರೇಬಿಯಾದ ರಿಯಾದ್ ಮತ್ತು ಜೆಡ್ಡಾ, ಮೊರೊಕ್ಕೋದಾ ಕ್ಯಾಸಾಬ್ಲಾಂಕಾ, ಟರ್ಕಿಯ ಇಸ್ತಾನ್‍ಬುಲ್, ಹಾಗೂ ಯುನೈಟೆಡ್ ಅರಬ್ ಎಮರೆಟ್ಸ್‍ನ ದುಬೈ ಮತ್ತು ಅಬುದಾಭಿ ನಗರಗಳಿಂದ ಅಮೆರಿಕಾಗೆ ತಡೆರಹಿತವಾಗಿ ಸಂಚರಿಸುವ ವಿಮಾನಗಳಲ್ಲಿ ಈ ನಿಯಮ ಜಾರಿಗೆ ಬಂದಿದ್ದು, ಅನಿರ್ದಿಷ್ಟಾವಧಿ ಮುಂದುವರಿಯಲಿದೆ.   ಅಮೆರಿಕದ ಈ ಹೊಸ ನಿರ್ಬಂಧವನ್ನು ವಿವಿಧ ಮೂಲಗಳು ಖಚಿತಪಡಿಸಿವೆ. ಇದಕ್ಕೆ ನಿರ್ದಿಷ್ಟ ಕಾರಣಗಳನ್ನು ತಿಳಿಸಿಲ್ಲ. ಸೆಲ್‍ಫೋನ್‍ಗಳು ಮತ್ತು ಎಲೆಕ್ಟ್ರಾನಿಕ್ ಮೆಡಿಕಲ್ ಉಪಕರಣಗಳಿಗೆ ಈ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin