ವಿಮಾನದಲ್ಲೂ ಪಸರಿಸಲಿದೆ ಸನ್ನಿ ‘ಸುಗಂಧ’

ಈ ಸುದ್ದಿಯನ್ನು ಶೇರ್ ಮಾಡಿ

Spice-Jet
ಸೆಕ್ಸ್ ಬಾಂಬ್ ಸನ್ನಿ ಲಿಯೋನ್ ಇನ್ನೂ ಮುಂದೆ ಅಂತರಿಕ್ಷದಲ್ಲೂ ಸುದ್ದಿ ಮಾಡಲಿದ್ದಾಳೆ. ಸ್ಫೈಸ್ ಜೆಟ್ ವಿಮಾನದಲ್ಲಿ ಇನ್ನು ಮುಂದೆ ಸನ್ನಿ ಬ್ರಾಂಡ್ ಅಂಬಾಸಿಡರ್ ಆಗಿರುವ ಲಸ್ಟ್ ಕಂಪನಿಯ ಸುಗಂಧದ್ರವ್ಯಗಳು ಮತ್ತು ಇತರ ಮಾದಕ ಉತ್ಪನ್ನಗಳು ವಿಮಾನದಲ್ಲೂ ಬಿಕರಿಯಾಗಲಿವೆ. ಇದರೊಂದಿಗೆ ಸ್ಪೈಸ್‍ಜೆಟ್ ಸಂಸ್ಥೆಗೆ ಗ್ರಾಹಕರನ್ನು ಆಕರ್ಷಿಸಲು ನೆರವಾಗುವ ಜೊತೆಗೆ ಹೆಚ್ಚುವರಿ ಲಾಭಗಳಿಸಲು ಸಹಕಾರಿಯಾಗಲಿದೆ. ನಾವು ಈ ಸಂಬಂಧ ಸನ್ನಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಸ್ಪೈಸ್‍ಜೆಟ್ ಜೊತೆ ಸಹಭಾಗಿತ್ವ ಹೊಂದಲು ಆಕೆ ಒಪ್ಪಿದ್ದಾಳೆ. ಅಲ್ಲದೇ ವಿಮಾನದಲ್ಲಿ ತನ್ನ ಬ್ರಾಂಡ್ ಉತ್ಪನ್ನಗಳ ಮಾರಾಟಕ್ಕೆ ಸಮ್ಮತಿ ಸೂಚಿಸಿದ್ದಾಳೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಗಂಧ ದ್ರವ್ಯಗಳು, ಪರಿಮಳಗಳು, ಬೆವರು ದುರ್ಗಂಧಕ ನಿವಾರಕಗಳು, ಸೆಕ್ಸಿ ಒಳ ಉಡುಪುಗಳು, ಹಾಗೂ ಇತರ ವಸ್ತುಗಳು ಸನ್ನಿ ಲಿಯೋನ್ ಮೂಲಕ ವಿಮಾನದ ಪ್ರಯಾಣಿಕರಿಗಾಗಿಯೇ ವಿಶೇಷವಾಗಿ ಮಾರಾಟವಾಗಲಿದೆ. ಮಾದಕ ಮೈಮಾಟದ ಸನ್ನಿ ಈಗಾಗಲೇ ಸ್ಪೈಸ್‍ಜೆಟ್‍ನ ಗುರಗಾಂವ್ ಕಚೇರಿಗೆ ಭೇಟಿ ನೀಡಿದ್ದು, ಸದ್ಯದಲ್ಲೇ ಒಪ್ಪಂದಕ್ಕೆ ಸನ್ನಿ ಸಹಿ ಹಾಕಲಿದ್ದಾಳೆ. ಅಲ್ಲಿಗೆ ಸನ್ನಿಯ ಸಮೂಹ ಗಗನದಲ್ಲೂ ಕಾಡಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin