ವಿಮಾನ, ಆಟೋಮೊಬೈಲ್ ತಯಾರಿಕೆಗೆ ಭಾರತ-ರಷ್ಯಾ ಸಹಭಾಗಿತ್ವ

ಈ ಸುದ್ದಿಯನ್ನು ಶೇರ್ ಮಾಡಿ

Modi-Putinn

ಸೆಂಟ್ ಪೀಟರ್ಸ್‍ಬರ್ಗ್, ಜೂ.2- ವ್ಯಾಪಾರ ಮತ್ತು ಆರ್ಥಿಕ ಬಾಂಧವ್ಯಗಳನ್ನು ಮತ್ತಷ್ಟು ಬಲಗೊಳಿಸಲು ಭಾರತ ಮತ್ತು ರಷ್ಯಾ ವಿಮಾನ ಮತ್ತು ಆಟೋಮೊಬೈಲ್ ತಯಾರಿಕೆಗೆ ಜಂಟಿ ಸಹಭಾಗಿತ್ವ ಸ್ಥಾಪನೆಗೆ ಸಮ್ಮತಿ ನೀಡಿವೆ.   ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ವಿಷಯ ತಿಳಿಸಿದ್ದು, ಎರಡೂ ದೇಶಗಳ ನಡುವೆ ಹೊಸ ಆರ್ಥಿಕ ಸಂಬಂಧದ ಯುಗ ಆರಂಭವಾಗಿದೆ ಎಂದರು.

ಭಾರತಕ್ಕೆ ಹೊಸ ಅಸ್ತ್ರ :

ವೈಮಾನಿಕ ಕ್ಷಿಪಣಿಗಳನ್ನು ಹೊಡೆದುರುಳಿಸುವ ಅತ್ಯಾಧುನಿ ಎಸ್-100 ಟ್ರಂಫ್ ಆಂಟಿ-ಏರ್‍ಕ್ರಾಫ್ಟ್ ಮಿಸೈಲ್ ಸಿಸ್ಟಮ್‍ಗಳನ್ನು ಭಾರತಕ್ಕೆ ಪೂರೈಸಲು ರಷ್ಯಾ ಸಜ್ಜಾಗಿದೆ. ಭೂಮಿಯಿಂದ ಗಗನಕ್ಕೆ ಚಿಮ್ಮಿ ನಿಖರವಾಗಿ ಕ್ಷಿಪಣಿಯನ್ನು ಹೊಡೆದುರುಳಿಸುವ ವಿಶ್ವದ ಬಹು ಸುಧಾರಿತ ಅಸ್ತ್ರವೆಂದು ಪರಿಗಣಿಸಲಾಗಿದೆ.
ಸೆಂಟ್ ಪೀಟರ್ಸ್‍ಬರ್ಗ್‍ನಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ರಷ್ಯಾ ಉಪ ಪ್ರಧಾನಿ ಡಿಮಿಟ್ರಿ ರೊಜೋಜಿನ್, ಈ ಬಗ್ಗೆ ಪೂರ್ವ-ಒಪ್ಪಂದ ಸಿದ್ದತೆಗಳು ನಡೆಯುತ್ತಿವೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin