ವಿಮಾನ ಗೋಪುರ ನಿರ್ಮಾಣಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

VIJAYAPURA

ವಿಜಯಪುರ, ಫೆ.4-ಸಾರ್ವಜನಿಕವಾಗಿ ಸೇವೆ ಮಾಡುತ್ತಿದ್ದೇನೆ ಎನ್ನುವುದಕ್ಕಿಂತಲೂ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುತ್ತಿರುವ ಬಗ್ಗೆ ದೇವರಿಗೆ ಕೃತಜ್ಞತೆ ತಿಳಿಸಬೇಕೆಂದು, ನಿಸರ್ಗ ಡೆವಲಪರ್ಸ್‍ನ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ಅವರು ಇಲ್ಲಿನ 12 ನೇ ವಾರ್ಡ್‍ನಲ್ಲಿನ ದುರ್ಗಾ ತಾಯಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀ ದುರ್ಗಾ ತಾಯಿ ದೇವಾಲಯದಲ್ಲಿ ವಿಮಾನ ಗೋಪುರ ನಿರ್ಮಾಣಕ್ಕೆ ಚಾಲನೆ ನೀಡಿ, ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಈಗಾಗಲೇ ದೇವನಹಳ್ಳಿ ತಾಲ್ಲೂಕಿನಾದ್ಯಂತ 140 ಕ್ಕೂ ಹೆಚ್ಚು ದೇವಾಲಯಗಳು ಜೀರ್ಣೋದ್ದಾರ ಕಾರ್ಯದಲ್ಲಿ ಕೈ ಜೋಡಿಸಿ, ಸಹಾಯ ಹಸ್ತ ನೀಡಿದ್ದು, ದೇವರು ಕೊಟ್ಟ ಹಣವನ್ನು ದೇವರ ಸೇವೆಗಾಗಿಯೇ ಬಳಸಲಾಗುತ್ತಿದ್ದು, ಸಾರ್ವಜನಿಕರು ಈ ಬಾರಿ ಆಶೀರ್ವದಿಸಿದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ತಾವು ನೀಡುವ ದಾನ, ಧರ್ಮ, ಹಾಗೂ ಬಡವರಿಗೆ ನೀಡುವ ಸಹಾಯ ಹಸ್ತಗಳೊಂದಿಗೆ ಸರಕಾರದ ನೆರವನ್ನು ಕೊಡಿಸಿಕೊಡಲು ಸಾಧ್ಯವಾದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪುರಸಭಾ ಮಾಜಿ ಉಪಾಧ್ಯಕ್ಷರುಗಳಾದ ಎಂ.ನಾಗರಾಜ್, ಅರುಣ ತಿರುಮಲೇಶ್, ಬಿಜ್ಜವಾರ ಆನಂದ್, ಲೇತು ನಾರಾಯಣಸ್ವಾಮಿ, ಹೋಬಳೇಶ್, ಅಮರನಾರಾಯಣಪ್ಪ, ಬಿಜೆಪಿ ಪರಿಶಿಷ್ಟ ಪಂಗಡದ ಪ್ರಭುರವರುಗಳು ಉಪಸ್ಥಿತರಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin