ವಿಮಾನ 3 ತುಂಡಾಗಿ ಬಿದ್ದರೂ ಪವಾಡ ಸದೃಶವಾಗಿ ಪ್ರಯಾಣಿಕರಿಗೆ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Plane-Crash

ಮಾಸ್ಕೊ,ಡಿ.19-ರಷ್ಯಾದ ಸೈಬೀರಿಯಾದಲ್ಲಿ ಯೋಧರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಎಲ್ಲಾ 39 ಮಂದಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಅಪಘಾತದಲ್ಲಿ ವಿಮಾನ ಮೂರು ಭಾಗವಾಗಿದ್ದರೂ ಅದರಲ್ಲಿದ್ದ 39 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಎಲ್ಲರೂ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ.   ಇಲ್ಯೂಷನ್-18 ವಿಮಾನದಲ್ಲಿ 32 ಯೋಧರು ಮತ್ತು ಏಳು ಮಂದಿ ಚಾಲನಾ ಸಿಬ್ಬಂದಿ ಇದ್ದರು.   ಹವಾಮಾನ ವೈಪರೀತ್ಯದಿಂದ ಪೂರ್ವ ಸೈಬೀರಿಯಾ ಪ್ರಾಂತ್ಯದ ಸಾಖಾ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin