ನಾನ್-ಲೈಫ್ ವಿಮೆ ಪ್ರೀಮಿಯಂ ದರದಲ್ಲಿ ಶೇ.10 ರಿಂದ 15ರಷ್ಟು ಹೆಚ್ಚಳ ಸಾಧ್ಯತೆ..!

ಈ ಸುದ್ದಿಯನ್ನು ಶೇರ್ ಮಾಡಿ

insurance-premium

ಮುಂಬೈ, ಮಾ.13- ನಾನ್-ಲೈಫ್ (ಜೀವ-ರಹಿತ) ವಿಮೆ ಮೇಲಿನ ಪ್ರೀಮಿಯಂ ದರವನ್ನು ಶೇ.10-15ರಷ್ಟು ಹೆಚ್ಚಿಸಲು ವಿಮಾ ಸಂಸ್ಥೆಗಳು ಗಂಭೀರ ಆಲೋಚನೆಯಲ್ಲಿ ತೊಡಗಿವೆ. ಬೃಹತ್ ಪ್ರಮಾಣದ ಕ್ಲೇಮು ಇತ್ಯರ್ಥಗಳು ಹಾಗೂ ಇತರ ಕಡಿಮೆ ಬಡ್ಡಿ ದರದಂಥ ಇತರ ನಕರಾತ್ಮಕ ಅಂಶಗಳಿಂದ ತೀವ್ರ ನಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಪ್ರೀಮಿಯಾ ದರ ಏರಿಸುವ ಸಾಧ್ಯತೆ ಇದೆ.   ವಿಮೆ ನಿಯಂತ್ರಣ ಸಂಸ್ಥೆ-ಐಆರ್‍ಡಿಎಐ ಸಹ ಪ್ರೀಮಿಯಂ ದರ ಹೆಚ್ಚಿಸುವ ಬಗ್ಗೆ ಈಗಾಗಲೇ ಮುನ್ಸೂಚನೆ ನೀಡಿದೆ. ಏಪ್ರಿಲ್ 1ರಿಂದ ಮೂರನೇ ವ್ಯಕ್ತಿಯ ಮೋಟಾರ್ ಪ್ರೀಮಿಯಂ ಮತ್ತು ಸಮೂಹ ಆರೋಗ್ಯ ವಿಮೆ ಮೇಲಿನ ಪ್ರೀಮಿಯಂ ಹೆಚ್ಚಿಸುವ ಬಗ್ಗೆಯೂ ಸಂಸ್ಥೆ ತಿಳಿಸಿದೆ.

ನಾನ್-ಲೈಪ್ ವಿಮೆ ಮೇಲಿನ ಪ್ರೀಮಿಯಂ ಶೇ.10 ರಿಂದ 15ರಷ್ಟು ಹೆಚ್ಚಳವಾದರೆ ಅದು ಅಚ್ಚರಿಯಲ್ಲ. ಈಗಾಗಲೇ ವಿಮಾ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಐಆರ್‍ಡಿಎಐ ಸದಸ್ಯ (ನಾನ್-ಲೈಫ್ ಇನ್ಸೂರೆನ್ಸ್) ಪಿ.ಜೆ.ಜೋಸೆಫ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin