ವಿಯೆಟ್ನಾಮ್‍ನ ಬಾರೊಂದರಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ 13 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Vietnam
ಹನೋಯ್, ನ.3- ವಿಯೆಟ್ನಾಮ್‍ನ ಕಾವು ಸ್ಲೇ ಜಿಲ್ಲೆಯ ಕರೋಕೆ ಬಾರೊಂದರಲ್ಲಿ ನಿನ್ನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.  ಬಹು ಅಂತಸ್ತುಗಳ ಕಟ್ಟಡದಲ್ಲಿ ಸರ್ಕಾರಿ ಸಿಬ್ಬಂದಿಯೊಬ್ಬರು ಆಯೋಜಿಸಿದ್ದ ಔತಣಕೂಟದ ವೇಳೆ ಬೆಂಕಿ ದುರಂತ ಸಂಭವಿಸಿತು. ಮೃತರಲ್ಲಿ ಬಹುತೇಕ ಮಂದಿ ಸರ್ಕಾರಿ ನೌಕರರಾಗಿದ್ದು, ಬೆಂಕಿಯ ದಟ್ಟ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಬೆಂಕಿ ಅನಾಹುತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಇಲಾಖೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಐದು ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿ ಅಗ್ನಿ ಪ್ರಕೋಪವನ್ನು ನಿಯಂತ್ರಿಸಿದರು.

Vietnam-1

ಅಗ್ನಿಯ ಜ್ವಾಲೆಗಳ ಅಕ್ಕಪಕ್ಕದ ಕಟ್ಟಡಗಳಿಗೂ ಚಾಚಿದ್ದರಿಂದ ಹಾನಿಯುಂಟಾಗಿದೆ. ಸುಟ್ಟು ಕರಕಲಾದ ಕಟ್ಟಡದ ಒಳಗೆ ಮದ್ಯದ ಬಾಟಲ್‍ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ದುರಂತದಲ್ಲಿ ಅನೇಕ ವಾಹನಗಳೂ ಸಹ ಸುಟ್ಟು ಕರಕಲಾಗಿವೆ.  ಈ ಘಟನೆ ಬಗ್ಗೆ ವಿಯೆಟ್ನಾಂ ಸರ್ಕಾರ ತನಿಖೆಗೆ ಆದೇಶಿಸಲಾಗಿದೆ.

► Follow us on –  Facebook / Twitter  / Google+

Vietnam-1-2

Facebook Comments

Sri Raghav

Admin