ವಿದೇಶಗಳಿಂದ ತಾಯ್ನಾಡಿಗೆ ಹಣ ರವಾನಿಸುವಲ್ಲಿ ವಿಶ್ವದಲ್ಲಿ ಭಾರತೀಯರೇ ನಂ.1

ಈ ಸುದ್ದಿಯನ್ನು ಶೇರ್ ಮಾಡಿ

India-Money

ನ್ಯೂಯಾರ್ಕ್, ಮೇ 13-ತಾಯ್ನಾಡಿಗೆ ಹಣ ರವಾನಿಸುವಲ್ಲಿ ವಿಶ್ವದಲ್ಲೇ ಭಾರತ ನಂಬರ್ ಒನ್ ಸ್ಥಾನ ಪಡೆದಿದೆ. ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಸಿಗ ಭಾರತೀಯರು 2017ರಲ್ಲಿ 69 ಶತಕೋಟಿ ಡಾಲರ್‍ಗಳನ್ನು ಸ್ವದೇಶಕ್ಕೆ ಕಳುಹಿಸಿದ್ದಾರೆ ಎಂದು ವರದಿಯೊಂದು ಹೇಳಿದೆ. ಏಷ್ಯಾ-ಪೆಸಿಫಿಕ್ ಪ್ರಾಂತ್ಯಕ್ಕೆ ವಿವಿಧ ದೇಶಗಳಿಂದ ಕಳೆದ ವರ್ಷ 256 ಶತಕೋಟಿ ಡಾಲರಗಳು ರವಾನಿಯಾಗಿವೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ವಲಸಿಗ ಭಾರತೀಯರು ತಮ್ಮ ದೇಶಕ್ಕೆ 69 ಶತಕೋಟಿ ಡಾಲರ್‍ಗಳನ್ನು ರವಾನಿಸಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಕ್ರಮಾಂಕದಲ್ಲಿ ಚೀನಾ(64 ಶತಕೋಟಿ ಡಾಲರ್) ಹಾಗೂ ಫಿಲಿಪೈನ್ಸ್(38 ಶತಕೋಟಿ ಡಾಲರ್) ದೇಶಗಳಿವೆ ಎಂದು ರೆಮಿಟ್‍ಸ್ಕೋಪ್ ಸಂಸ್ಥೆ ವರದಿ ಅಂಕಿ-ಅಂಶ ನೀಡಿದೆ.

ಪಾಕಿಸ್ತಾನ (20 ಶತಕೋಟಿ ಡಾಲರ್) ಮತ್ತು ವಿಯೆಟ್ನಾಂ (14 ಶತಕೋಟಿ ಡಾಲರ್) ರಾಷ್ಟ್ರಗಳೂ ಸಹ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಏಷ್ಯಾ ಮತ್ತು ಫೆಸಿಫಿಕ್ ಪ್ರಾಂತ್ಯಕ್ಕೆ ರವಾನಿಸಲಾದ ಹಣದಲ್ಲಿ ಶೇಕಡ 70ರಷ್ಟು ಪ್ರಮಾಣವು ವಿಶೇವಾಗಿ ಕೊಲ್ಲಿ ದೇಶಗಳಿಂದ (ಶೇ.32ರಷ್ಟು) ಬಂದದ್ದಾಗಿದೆ. ನಂತರದ ಸ್ಥಾನಗಳಲ್ಲಿ ಉತ್ತರ ಅಮೆರಿಕ(ಶೇ.26) ಮತ್ತು ಯೂರೋಪ್ (ಶೇ.12) ಖಂಡಗಳಿಂದ ರವಾನೆಯಾದ ಹಣವಾಗಿದೆ.

ಭಾರತೀಯರ ಕೊಲ್ಲಿ ರಾಷ್ಟ್ರಗಳು, ಉತ್ತರ ಅಮೆರಿಕ ಹಾಗೂ ಯುರೋಪ್ ಖಂಡ ಸೇರಿದಂತೆ ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗಳಿಸಿದ ಹಣದಲ್ಲಿ ಉಳಿಸಿದ್ದನ್ನು ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ರವಾನಿಸುತ್ತಿದ್ದಾರೆ. ಇದರಲ್ಲಿ ಭಾರತೀಯರ ಪಾಲೇ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Facebook Comments

Sri Raghav

Admin