ವಿರೂಪಗೊಳಿಸಿದ ಭಾರತದ ಭೂಪಟ ಮಾರಾಟ ಮಾಡುತ್ತಿರುವ ಅಮೆಝಾನ್ ವಿರುದ್ಧ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Amazon-Indian-Flag

ನವದೆಹಲಿ, ಮೇ 9-ವಿವಾದಿತ ಭೂಪ್ರದೇಶಗಳನ್ನು ಕೈಬಿಟ್ಟು ರಚಿಸಲಾದ ಭಾರತದ ಭೂಪಟವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಆನ್‍ಲೈನ್ ಮಾರಾಟ ವೆಬ್‍ಸೈಟ್ ಅಮೆಝಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಈ ಭೂಪಟವನ್ನು ಹಿಂದಕ್ಕೆ ಪಡೆಯಬೇಕು ಎಂದು ಟ್ವೀಟರ್ ಮೂಲಕ ಸಂಸ್ಥೆಯನ್ನು ಆಗ್ರಹಿಸಿದ್ದಾರೆ.  ದೆಹಲಿಯ ಬಿಜೆಪಿ ನಾಯಕ ತೇಜಿಂದರ್ ಪಾಲ್ ಎಸ್ ಬಗ್ಗಾ ಈ ಬಗ್ಗೆ ಟ್ವೀಟ್ ಮಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಇಲ್ಲದ ಭೂಪಟವನ್ನು ಕೆನಡಾದಲ್ಲಿ ಕಾನೂನುಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.ಈ ವಿರೂಪಗೊಳಿಸದ ಭೂಪಟಕ್ಕೆ 25 ಡಾಲರ್ ಬೆಲೆ ನಿಗದಿಗೊಳಿಸಲಾಗಿದೆ. ಇದು ಭೂಆಕಾಶ ಮಾಹಿತಿ ನಿಯಂತ್ರಣ ಕಾಯ್ದೆ 2016ರ ಉಲ್ಲಂಘನೆಯಾಗಿದೆ. ಈ ಅಧಿನಿಯಮದ ಪ್ರಕಾರ, ಭಾರತದ ಯಾವುದೇ ಭೂಮಿ ಅಥವಾ ವಾಯು ವ್ಯಾಪ್ತಿ ಪ್ರದೇಶದ ಬಗ್ಗೆ ಚಿತ್ರ ಅಥವಾ ಲೇಖನ ಪ್ರಕಟಿಸುವ ಮುನ್ನ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದವರಿಗೆ 7 ವರ್ಷ ಜೈಲು ಮತ್ತು 1 ಕೋಟಿ ರೂ. ದಂಡ ವಿಧಿಸಬಹುದಾಗಿದೆ.    ಭಾರತದ ನಕ್ಷೆ ಮತ್ತು ಧ್ವಜಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಕೆಲವು ವಸ್ತುಗಳನ್ನು ಈ ಹಿಂದೆ ಅಮೆಝಾನ್ ಮಾರಾಟ ಮಾಡಿ ವಿವಾದಕ್ಕೆ ಗುರಿಯಾಗಿ ಸಾರ್ವಜನಿಕರು ಮತ್ತು ಸರ್ಕಾರದಿಂದ ಛೀಮಾರಿ ಹಾಕಿಸಿಕೊಂಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin