ವಿಲಾಸಿ ಜೀವನಕ್ಕಾಗಿ ದರೋಡೆ, ಕಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arretesd

ಬೆಂಗಳೂರು, ಮೇ 18- ಮೋಜಿನ ಜೀವನಕ್ಕೆ ಮಾರುಹೋಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾರಾಯಣ (21), ವಿನೋದ (22), ದೀಪಕ್ (180 ಬಂಧಿತ ಕಳ್ಳರಾಗಿದ್ದು, ಇವರಿಂದ 3.80 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.ವಿಲಾಸಿ ಜೀವನ ನಡೆಸಲು ಇವರು ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಆ ಮೂಲಕ ವಾಹನ ಸವಾರರು ಹಾಗೂ ಸಾರ್ವಜನಿಕರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬೆಲೆ ಬಾಳುವ ಆಭರಣ, ಮೊಬೈಲ್, ಹಣ ದೋಚಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದರು.
ಸಮಾಜದಲ್ಲಿ ಭಯಮುಕ್ತ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ಸೂ ರ್ಯನಾರಾಯಣರಾವ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡ ಪರಪ್ಪನ ಅಗ್ರಹಾರ ಠಾಣೆ ಇನ್ಸ್‍ಪೆಕ್ಟರ್ ಕಿಶೋರ್‍ಕುಮಾರ್ ಮತ್ತು ಅವರ ತಂಡ ಸತತ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸಿ ಮೂರು ದ್ವಿಚಕ್ರ ವಾಹನ, ಮೂರು ಮೊಬೈಲ್ ಸೇರಿದಂತೆ 3.80 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ವಿಲಾಸಿ ಜೀವನಕ್ಕೆ ಮಾರು ಹೋಗಿ ಗಾಂಜಾ ಸೇವನೆ, ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗಿ ಮೋಜಿನ ಜೀವನ ನಡೆಸಲು ಹಾಗೂ ತಮ್ಮ ದುಶ್ಚಟಗಳನ್ನು ಪೂರೈಸಿಕೊಳ್ಳಲು ದರೋಡೆ, ಸುಲಿಗೆ, ಕಳ್ಳತನ ಮಾಡಲು ತಂಡ ರಚಿಸಿಕೊಂಡು ಅದರಂತೆ ನಗರದ ವಿವಿಧ ಕಡೆ ದುಷ್ಕøತ್ಯಗಳನ್ನೆಸಗುತ್ತಿದ್ದರು.

 
ಮೈಕೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕೆಟಿಎಂ ವಿಲಾಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಈ ಬೈಕ್‍ಗಳನ್ನೇ ಬಳಸಿಕೊಂಡು ಸರ್ಜಾಪುರ ಹಾಗೂ ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ದಾರಿಹೋಕರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.ಆರೋಪಿಗಳ ಪತ್ತೆಯಿಂದಾಗಿ ಸರ್ಜಾಪುರ ಠಾಣೆಯ ಒಂದು ದರೋಡೆ ಪ್ರಕರಣ, ಮೈಕೋ ಲೇಔಟ್ ಎರಡು ಬೈಕ್ ಕಳ್ಳತನ, ಪರಪ್ಪನ ಅಗ್ರಹಾರ ಠಾಣೆಯ ಒಂದು ವಾಹನ ಕಳ್ಳತನ ಹಾಗೂ ರಾತ್ರಿ ವೇಳೆಯಲ್ಲಿ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಮೂರು ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin