ವಿವಾದವೆಬ್ಬಿಸಿದೆ ವರ್ಮಾನ ಕರ್ಮದ ಟ್ವೀಟ್ : ರಜನಿ, ವಿಷ್ಣು ಅವಮಾನಿಸಿದ ರಾಂಗೋಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

Vishnu

ಬೆಂಗಳೂರು.ಆ.17: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರವನ್ನು ನೋಡಿದ ಬಹುಭಾಷಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕಿಚ್ಚನನ್ನು ಹೋಗಳುವ ಭರದಲ್ಲಿ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ವರನ್ನು ಕುರಿತು ಅವಹೇಳನಕಾರಿ ಟ್ವೀಟ್ ಮಾಡಿ ಮತ್ತೆ ವಿವಾದದಲ್ಲಿದ್ದಾರೆ.  ರಜಿನಿಕಾಂತ್ ಮಾಡಿರೋ ರೋಬೋಟ್ ಸಿನಿಮಾವನ್ನು ನೀವು ಕನಸಿನಲ್ಲಾದ್ರು ಮಾಡ್ಬೋದು. ಆದ್ರೆ ನೀವು ಮಾಡಿರೋ ಈಗ ಚಿತ್ರವನ್ನು ಕನಸಿನಲ್ಲೂ ರಜಿನಿಕಾಂತ್ ಮಾಡೋದಿಕ್ಕೆ ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.  ಕೋಟಿಗೊಬ್ಬ 2 ಸಿನಿಮಾ ನೋಡಿದ ಮೇಲೆ ಕಿಚ್ಚ ಸುದೀಪ್ ಬದಲು ನಿಮ್ಮ ಹೆಸರನ್ನು ರಜಿನಿ ಸುದೀಪ್ ಎಂದು ಬದಲಾಯಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

2b2c754a-0137-4578-951e-892d70e2f920
ee13bc4a-3d62-47e5-b483-9e8155b96f3a

e92052a9-8122-4005-ba39-eaaf2ccabd84

ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿರುವ ರಾಮ್ ಗೋಪಾಲ್ ವರ್ಮಾ ಮತ್ತೊಂಮ್ಮೆ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಕೋಟಿಗೊಬ್ಬ 2 ಚಿತ್ರ ನೋಡಿದ ಮೇಲೆ ಕೋಟಿಗೋಬ್ಬ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿನಯ ಅಪ್ರಬುದ್ಧವಾಗಿದೆ ಎಂದಿದ್ದಾರೆ. ನಾನು ಹೀಗೆ ಹೇಳುವ ಮಾತನ್ನು ವಿಷ್ಣು ಅಭಿಮಾನಿಗಳು ಒಪ್ಪಿಕೊಳ್ಳುವುದಿಲ್ಲ, ಕಾರಣ ಅವರು ಅಪ್ರಬುದ್ಧ ಮನಸ್ಸಿನವರು ಎಂದು ಅವರು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.  ಇದಕ್ಕೆ ಟ್ವಿಟರ್ ನಲ್ಲೆ ಪ್ರತಿಕ್ರಿಯಿಸಿದ ಸುದೀಪ್ ನಾನು ಅವರ ಪಕ್ಕದಲ್ಲೂ ನಿಲ್ಲಲು ಅರ್ಹನಲ್ಲ, ನಿಮ್ಮ ಅಪ್ರಿಷಿಯೇಷನ್ ಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.  ಕಾಂಟ್ರವರ್ಸಿ ಟ್ವೀಟ್ ಮಾಡಿ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin