ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿಗೆ ಸೆ.2ಕ್ಕೆ ಬಂದ್

ಈ ಸುದ್ದಿಯನ್ನು ಶೇರ್ ಮಾಡಿ

Gowribidanuru

ಗೌರಿಬಿದನೂರು,ಆ.27-ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿಗೆ ಸೆ.1ರಂದು ಪಿಕೆಟಿಂಗ್ ಮತ್ತು ಸೆ.2ರಂದು ತಾಲೂಕು ಬಂದ್ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕುಅದ್ಯಕ್ಷ ಆರ್.ಎನ್.ರಾಜು ಮತ್ತು ಕಾರ್ಯದರ್ಶಿ ಆರ್.ರವಿಚಂದ್ರರೆಡ್ಡಿ ತಿಳಿಸಿದರು.ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ರೈತರ ಬೇಡಿಕೆಗಳ ದಿನಾಚರಣೆ ಅಂಗವಾಗಿ ಆ.25ರಿಂದ 31ವರಗೆ ವಿವಿಧ ಬೇಡಿಕೆ ಈಡೀರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಪ್ರಚಾರಾಂದೋಲನ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಜೀವನದಿ ನಾಲೆಗಳಿಲ್ಲದ ಮಳೆಯಾಶ್ರಿತ ವ್ಯವಸಾಯವನ್ನು ಇಲ್ಲಿನ ರೈತರು ನೆಚ್ಚಿಕೊಂಡಿದ್ದಾರೆ, ರೈತರ ಪರ ಎಂದು ಹೇಳುವ ಸರಕಾರಗಳು ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎನ್ನುವುದಕ್ಕೆ ರಾಜ್ಯದಲ್ಲಿನ ರೈತರ ಆತ್ಮಹತ್ಯೆಗಳೇ ಪ್ರತ್ಯಕ್ಷ ಸಾಕ್ಷಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ತೋಮಾಳ, ಖರಾಬು, ಅರಣ್ಯದ ಹೆಸರಿನಲ್ಲಿ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಕಸಿದುಕೊಳ್ಳದೆ ಉಳುವವನಿಗೆ ಭೂಮಿ ಮಂಜೂರು ಮಾಡಬೇಕು, ಬರಪೀಡಿತ ನಾಡಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಬೇಕು, ಅವೈಜ್ಞಾನಿಕ ಎಸ್.ಎಲ್.ಎಫ್. ಪದ್ದತಿಯನ್ನು ರದ್ದು ಮಾಡಿ ಹಾಲು ಉತ್ಪಾದಕರಿಗೆ ಪ್ರೊತ್ಸಾಹ ಧನ ನೀಡಬೇಕು ಪಶುಗಳಿಗೆ ರಿಯಾಯಿತಿ ದರದಲ್ಲಿ ಆಹಾರ ನೀಡಬೇಕು ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.ಕಾರ್ಯದರ್ಶಿ ಆರ್.ರವಿ ಚಂದ್ರ ರೆಡ್ಡಿ , ತಾಲೂಕು ಕೃಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳಾದ ಅನ್ವರ್ ಪಾಷಾ, ಕೋಲಾಟ ನರಸಿಂಹರೆಡ್ಡಿ, ಮಂಜುನಾಥ್, ಬುರೇನ್, ಗಂಗಾಧರಪ್ಪ, ಚನ್ನಪ್ಪ, ಕಡಬೂರು ಅಶ್ವತ್ಥಪ್ಪ ಮುಂತಾದವರು ಈ ಸಂದರ್ಬದಲ್ಲಿ ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin