ವಿವಿಯಲ್ಲಿ ಅವ್ಯವಹಾರ ನಡೆದಿದ್ದರೆ ಯಾವುದೇ ತನಿಖೆಗೂ ಸಿದ್ಧ : ಪ್ರೊ.ರಂಗಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Rangappa--01

ಮೈಸೂರು, ಆ.2-ಮೈಸೂರು ವಿಶ್ವವಿದ್ಯಾಲಯ ಅಥವಾ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನನ್ನ ಅವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅವ್ಯವಹಾರ ನಡೆದಿದೆ ಎನ್ನುವುದಾದರೆ ಯಾವುದೇ ತನಿಖೆಗೂ ಸಿದ್ಧ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ತಿಳಿಸಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‍ಒಯುನಲ್ಲಿ ನಡೆದಿರುವ
ನಕಲಿ ಅಂಕಪಟ್ಟಿ ಹಗರಣ ನನ್ನ ಅವಧಿಯಲ್ಲಿ ನಡೆದಿರುವುದೇ ಆಗಿದ್ದಲ್ಲಿ ಸಿಸಿಬಿ ಯಿಂದ ಸಿಬಿಐ ತನಿಖೆಯವರೆಗೂ ತಾವು ಸಿದ್ಧರಾಗಿದ್ದು, ಅದನ್ನು ಎದುರಿಸುವುದಾಗಿ ಹೇಳಿದರು.

ಇತ್ತೀಚೆಗೆ ತಾವು ಜೆಡಿಎಸ್ ಪಕ್ಷಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದನ್ನು ಸಹಿಸದ ಕೆಲವರು ನನ್ನ ತುಳಿಯುವುದಕ್ಕಾಗಿಯೇ ಇಲ್ಲಸಲ್ಲದ ಆರೋಪ ಮಾಡಿ ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ನನ್ನ ಅವಧಿಯಲ್ಲಿ ಕೆಎಸ್‍ಒಯುನಲ್ಲಿ ಎಷ್ಟು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದರೋ ಅಷ್ಟೇ ಅಂಕಪಟ್ಟಿಯನ್ನು ಪ್ರಿಂಟ್ ಮಾಡಿಸಲಾಗಿತ್ತು. ಹಾಗಾಗಿ ನನ್ನ ಅವಧಿಯಲ್ಲಿ ಯಾವುದೇ ನಕಲಿ ಅಂಕಪಟ್ಟಿ ಹಗರಣ ನಡೆದಿಲ್ಲ. ಈ ಸಂಬಂಧ ಯಾವುದೇ ತನಿಖೆಗೂ ಸಿದ್ಧ ಎಂದು ಸ್ಪಷ್ಟಪಡಿಸಿದರು.

ಮೈಸೂರು ವಿವಿ ಕುಲಪತಿಯಾಗಿದ್ದ ನಡೆದಂತಹ ಸಮಾವೇಶದಲ್ಲಿ 9 ಕೋಟಿ ರೂ. ಹಣವನ್ನು ಊಟಕ್ಕೆ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಇದು ಸತ್ಯಕ್ಕೆ ದೂರ. ಟೆಂಡರ್ ಕರೆದು ಕೊಟ್ಟಿರುವುದು. ಅದಕ್ಕಾಗಿ 5.5 ಕೋಟಿ ರೂ. ಮಾತ್ರ ವೆಚ್ಚವಾಗಿದೆ. ನಾನು ಯಾವುದೇ ಕಾನೂನು ಗಾಳಿಗೆ ತೂರಿಲ್ಲ. ಕಾನೂನು ವ್ಯಾಪ್ತಿಯೊಳಗೆ ಎಲ್ಲಾ ಕೆಲಸ ಮಾಡಿದ್ದೇನೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin