ವಿಶ್ವಕಪ್ ಶೂಟಿಂಗ್ : ಅಖಿಲ್ ಸಾಧನೆ, ಭಾರತಕ್ಕೆ ಮತ್ತೊಂದು ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

Akhil

ಗಾದಲಜಾರಾ, ಮಾ.11-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ 50 ಮೀಟರ್ ರೈಫಲ್ 3-ಪೋಸಿಷನ್‍ನಲ್ಲಿ ಅಖಿಲ್ ಶೆಯೊರಾನ್ ಚಿನ್ನ ಗೆದ್ದು ಭಾರತದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಫೈನಲ್‍ನಲ್ಲಿ ಅಖಿಲ್ 455.6 ಪಾಯಿಟ್‍ಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದರು. ಆಸ್ಟ್ರಿಯಾದ ಬರ್ನಾಡ್ ಪಿಕಲ್ ದ್ವಿತೀಯ ಸ್ಥಾನ ಗಳಿಸಿದರು.

ಗಾದಲಜಾರಾದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವ ಕಪ್‍ನಲ್ಲಿ ತೀವ್ರ ಪೈಪೋಟಿ ನಡುವೆ ಪದಕ ಗೆದ್ದ ಭಾರತದ ನಾಲ್ಕನೇ ಅತಿ ಕಿರಿಯ ಶೂಟರ್ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದಾರೆ. ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಅಖಿಲ್ ಸುವರ್ಣ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ.
ಈಗಾಗಲೇ ಕಿರಿಯ ಶೂಟರ್‍ಗಳಾದ ಶಹಜರ್ ರಿಜ್ವಿ, ಮನು ಭಾಕರ್, ಮೆಹುಲಿ ಘೋಷ್ ಮತ್ತು ಅಂಜುಮ್ ಮËಡ್ಗಿಲ್ ಪದಕಗಳನ್ನು ಗೆದ್ದು ಭಾರತ ಅಗ್ರಸ್ಥಾನದ ಗೌರವ ತಂದುಕೊಟ್ಟಿದ್ದಾರೆ. ಅಖಿಲ್ ಗೆದ್ದಿರುವ ಚಿನ್ನದ ಪದಕವು ಭಾರತಕ್ಕೆ ದಕ್ಕಿದ ನಾಲ್ಕನೇ ಬಂಗಾರವಾಗಿದೆ.

Facebook Comments

Sri Raghav

Admin