ವಿಶ್ವಕ್ಕೆ ಹೊಸ ರೂಪ ನೀಡುವಲ್ಲಿ ಭಾರತ-ಚೀನಾ ಪಾತ್ರ ದೊಡ್ಡದು ; ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ಪ್ರಿನ್ಸ್‍ಟನ್, ಸೆ.20- ವಿಶ್ವವು ಮೂಲಭೂತವಾಗಿ ಯಾವ ರೀತಿ ರೂಪುಗೊಳ್ಳಬೇಕು ಎಂಬುದನ್ನು ನಿರ್ಣಯಿಸುವಲ್ಲಿ ಭಾರತ ಮತ್ತು ಚೀನಾದ ಸಾಧನೆ ಮಹತ್ವದ್ದಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಪ್ರಿನ್ಸ್‍ಟನ್ ವಿಶ್ವ ವಿದ್ಯಾಲಯದಲ್ಲಿ ಇಂದು ವಿದ್ಯಾರ್ಥಿ ಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಭಾರತ ಮತ್ತು ಚೀನಾ ಕೃಷಿ ರಾಷ್ಟ್ರಗಳಿಂದ ಆಧುನಿಕ ಮಾದರಿ ದೇಶಗಳಾಗಿ ಪರಿವರ್ತನೆಯಾಗಿವೆ ಎಂದು ಅವರು ಬಣ್ಣಿಸಿದರು.

ಚೀನಾಗೆ ತನ್ನದೇ ಆದ ದಾರಿ ಇದೆ. ಭಾರತ ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಆ ದೇಶ ಕೇಂದ್ರೀಯ ನಿಯಂತ್ರಣದಲ್ಲಿದೆ. ಆದರೆ ಭಾರತ ಮುಕ್ತ ಸ್ವಾತಂತ್ರ ಹೊಂದಿದೆ. ಈ ಮಾರ್ಗಗಳು ವಿಭಿನ್ನವಾಗಿದ್ದರೂ, ವಿಶ್ವಕ್ಕೆ ಮರು ರೂಪ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ರಾಹುಲ್ ಹೇಳಿದರು.
ಜಗತ್ತಿನ ಅತ್ಯಧಿಕ ಜನಸಂಖ್ಯೆ ಹೊಂದಿರುವ ಈ ಎರಡು ದೇಶಗಳ ತೀವ್ರ ಸ್ಪರ್ಧೆ ಇದೆ. ನಿರುದ್ಯೋಗ ನಿವಾರಣೆಗೆ ನಾವು ಶ್ರಮಿಸುತ್ತಿದ್ದೇವೆ. ಇದೇ ವೇಳೆ ಚೀನಾದೊಂದಿಗೆ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ನೀಡುತ್ತಿದ್ದೇವೆ ಎಂದು ಅವರು ತುಲನೆ ಮಾಡಿದರು.

Facebook Comments

Sri Raghav

Admin