ವಿಶ್ವದಾದ್ಯಂತ 9000 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ‘ಬಾಹುಬಲಿ’ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Bahubali--001

ಬೆಂಗಳೂರು,ಏ.28- ಕುತೂಹಲ ಮತ್ತು ಭಾರೀ ವಿವಾದದಿಂದ ತೆಲುಗಿನ ಬಾಹುಬಲಿ-2 ಚಿತ್ರ ನಿನ್ನೆ ರಾತ್ರಿಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ಪ್ರದರ್ಶನ ಕಂಡಿದೆ. ಅದರಲ್ಲೂ ಮೂರ್ನಾಲ್ಕು ಪಟ್ಟು ಹೆಚ್ಚಿನ ದರ ನೀಡಿ ಟಿಕೆಟ್ ಖರೀದಿಸಿ ಸಿನಿ ಪ್ರಿಯರು ಮುಗಿಬಿದ್ದು ಚಿತ್ರ ವೀಕ್ಷಿಸಿದ್ದಾರೆ.
ಬಾಹುಬಲಿ-2 ಚಿತ್ರಕ್ಕೆ ಕೌಂಟರ್ ಮತ್ತು ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಮೂಲಕ ಟಿಕೆಟ್ ಖರೀದಿಸಿ ಮೊದಲ ಪ್ರದರ್ಶನವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದ ಪ್ರೇಕ್ಷಕರು ನಿನ್ನೆ ರಾತ್ರಿ 12 ಗಂಟೆ ಪ್ರದರ್ಶನದಲ್ಲಿ ಚಿತ್ರ ವೀಕ್ಷಿಸಿದ್ದಾರೆ. 

 
ಕರ್ನಾಟಕದಲ್ಲಿ ವಿವಾದ ಸೃಷ್ಟಿಯಾಗಿದ್ದ ಬೆನ್ನಲ್ಲೂ ಚಿತ್ರ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗಲಿಲ್ಲ. ಪ್ರೇಕ್ಷಕರು ಬಿಗಿಬಿದ್ದು ರಾತ್ರಿಯಿಂದಲೇ ಚಿತ್ರ ವೀಕ್ಷಣೆಗೆ ಮುಂದಾಗಿದ್ದು ,ಇಂದು ಸಹ ಚಿತ್ರಮಂದಿರಗಳ ಮುಂದೆ ಸಾವಿರಾರು ಮಂದಿ ಜಮಾಯಿಸಿ ಟಿಕೆಟ್ ಖರೀದಿಗೆ ನೂಕು ನುಗ್ಗಲು ಉಂಟಾಗುವಂತಾಗಿದೆ.
ಕೆಲವೆಡೆ ಲಾಠಿ ಚಾರ್ಜ್ ಸಹ ನಡೆದಿದ್ದು , ಜನರನ್ನು ನಿಯಂತ್ರಿಯಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಒಟ್ಟಾರೆ ಸಾಕಷ್ಟು ಕುತೂಹಲ ಮೂಡಿಸಿರುವ ಬಾಹುಬಲಿ-2 ಚಿತ್ರ ವೀಕ್ಷಣೆಗೆ ಜನ ಎಲ್ಲಿಲ್ಲದ ಉತ್ಸಾಹ ತೋರುತ್ತಿರುವುದು ಎಷ್ಟೇ ಖರ್ಚಾದರೂ ಚಿತ್ರ ನೋಡಲೇಬೇಕೆಂದು ಚಿತ್ರಮಂದಿರಗಳಿಗೆ ಎಡತಾಕುತ್ತಿದ್ದಾರೆ.

ಕರ್ನಾಟಕ ಸರ್ಕಾರ ಮಲ್ಟಿಫ್ಲೆಕ್ಸ್‍ಗಳಲ್ಲಿ ಒಂದೇ ರೀತಿಯ ದರ ನಿಗದಿಗೊಳಿಸಿದ್ದ ಹಿನ್ನೆಲೆಯಲ್ಲಿ ಮಲ್ಟಿಫ್ಲೆಕ್ಸ್ ಮಾಲೀಕರು ಒಂದು ದಿನ ಮುಂಚಿತವಾಗಿಯೇ ಚಿತ್ರಪ್ರದರ್ಶನಕ್ಕೆ ಮುಂದಾಗಿ ಟಿಕೆಟ್ ದರವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಿದ್ದರೂ ಸಿನಿಪ್ರಿಯರು ಮಾತ್ರ ಚಿತ್ರ ವೀಕ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ.

ಕೋಲಾರ:
ಬಹುನಿರೀಕ್ಷಿತ ಬಾಹುಬಲಿ-2 ಚಿತ್ರ ವೀಕ್ಷಿಸಲು ಜನ ಮುಗಿಬಿದ್ದಿರುವ ನಡುವೆ ಪೊಲೀಸರ ಎದುರೇ ರಾಜಾರೋಷವಾಗಿ ಬ್ಲಾಕ್ ಟಿಕೆಟ್ ಸಹ ಮಾರಾಟವಾಗುತ್ತಿದೆ.
ಕೋಲಾರದ ನಾರಾಯಣ ಚಿತ್ರಮಂದಿರದಲ್ಲಿ 9 ಗಂಟೆ ಶೋಗೆ ಬ್ಲಾಕ್ ಟಿಕೆಟ್ ಮಾರಾಟವಾಗುತ್ತಿದ್ದು, 400 ರಿಂದ 500ರೂ.ವರೆಗೆ ಹಣ ನೀಡಿ ಟಿಕೆಟ್ ಖರೀದಿಸಲಾಗುತ್ತಿದೆ. ಚಿತ್ರಮಂದಿರಗಳ ಸಿಬ್ಬಂದಿ ಸೇರಿದಂತೆ ಕೆಲವರು ರಾಜಾರೋಷವಾಗಿ ಬ್ಲಾಕ್ ಟಿಕೆಟ್ ಮಾರಾಟಕ್ಕೆ ಇಳಿದಿದ್ದು, ಬಂದೋಬಸ್ತ್‍ಗಾಗಿ ನೇಮಿಸಿದ್ದ ಪೊಲೀಸರಿಗೂ ಕ್ಯಾರೆ ಎನ್ನದೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.  ಇಂದು ಬಿಡುಗಡೆಗೊಳ್ಳಬೇಕಿದ್ದ ಬಾಹುಬಲಿ-2 ಚಿತ್ರ ನಿನ್ನೆ ರಾತ್ರಿ 12 ಗಂಟೆಯ ಪ್ರದರ್ಶನ ಕಂಡಿದ್ದು, ಹಲವು ಮಲ್ಟಿಫ್ಲೆಕ್ಸ್‍ಗಳಲ್ಲಿ ಒಂದು ದಿನ ಮುಂಚೆಯೇ ಚಿತ್ರ ಪ್ರದರ್ಶನ ಮಾಡಲಾಗಿದೆ.
ಹೈದರಾಬಾದ್:

ವಿಶ್ವಾದ್ಯಂತ 9000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿರುವ ಬಿಡುಗಡೆಯಾಗಿ ಬಾಹುಬಲಿ-2 ಚಿತ್ರವನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 4000 ರೂ.ಗಳಿಗೆ ಟಿಕೆಟ್ ಬ್ಲಾಕ್‍ನಲ್ಲಿ ಮಾರಾಟವಾಗಿದೆ. ಅವಿಭಜಿತ ಆಂಧ್ರಪ್ರದೇಶದಾದ್ಯಂತ ಶೇ.90ರಷ್ಟು ಚಿತ್ರಮಂದಿರಗಳಲ್ಲಿ ಬಾಹುಬಲಿ ಸಿನಿಮಾ ಬಿಡುಗಡೆಯಾಗಿದ್ದು , ಉರಿವ ಬಿಸಿಲನ್ನು ಲೆಕ್ಕಸದೆ ಪ್ರೇಕ್ಷಕರು ಉದ್ದನೆಯ ಸಾಲಿನಲ್ಲಿ ನಿಂತು ನೂಕು ನುಗ್ಗಲಿನಲ್ಲಿ ಟಿಕೆಟ್ ಖರೀದಿಸಿದ್ದಾರೆ.  ಇನ್ನೊಂದೆಡೆ ಆಂಧ್ರಪ್ರದೇಶ ಮತ್ತು ತೆಲಂಗಾಣದ ಬಹುತೇಕ ನಗರಗಳಲ್ಲಿ 400ರಿಂದ 600 ರೂ.ಗಳವರೆಗೆ ಹಣ ನೀಡಿ ಅಭಿಮಾನಿಗಳು ಕಾಳಸಂತೆಯಲ್ಲಿ ಟಿಕೆಟ್‍ಗಳನ್ನು ಖರೀದಿಸುತ್ತಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ರಾಜಾರೋಷವಾಗಿ ಕಾಳಸಂತೆಯಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಕೆಲವೆಡೆ ಬ್ಲಾಕ್ ಮಾರ್ಕೆಟ್‍ನಲ್ಲಿ ಮಾರಾಟ ಮಾಡುತ್ತಿದ್ದ ಕಾಳಸಂತೆಕೋರರನ್ನು ಎಸ್‍ಒಟಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin