ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ TOP-10 ನಟಿಯರ ಪಟ್ಟಿಯಲ್ಲಿ ದೀಪಿಕಾ

ಈ ಸುದ್ದಿಯನ್ನು ಶೇರ್ ಮಾಡಿ

S-Deepika-Padukone

ನ್ಯೂಯಾರ್ಕ್ ಆ.24 : ವಿಶ್ವದ ಅತ್ಯಧಿಕ ಸಂಭಾವನೆ ಪಡೆಯುವ 10 ನಟಿಮಣಿಗಳ ಪಟ್ಟಿಯಲ್ಲಿ ಬಾಲಿವುಡ್‍ನ ನೀಳಕಾಯದ ಬೆಡಗಿ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಸ್ಥಾನಪಡೆದಿದ್ದಾರೆ. ಭಾರತದ ನಟಿಯೊಬ್ಬರು ಫೋಬ್ರ್ಸ್ ಪಟ್ಟಿಯಲ್ಲಿ ಸ್ಥಾನಪಡೆದಿರುವುದು ಇದೇ ಮೊದಲು.    2016ರ ಫೋಬ್ರ್ಸ್ ‘ವಲ್ಡ್ರ್ಸ್ ಹೈಯೆಸ್ಟ್ ಪೇಯ್ಡ್ ಆ್ಯಕ್ಟರ್ಸ್” ಪಟ್ಟಿಯಲ್ಲಿ 30 ವರ್ಷದ ದೀಪಿಕಾ ಪಡುಕೋಣೆ 10ನೇ ಸ್ಥಾನ ಪಡೆದಿದ್ದಾರೆ. ಹಾಲಿವುಡ್‍ನ ಹೇವಿವೇಟ್ ನಟಿಯರಾದ ಆಸ್ಕರ್ ಪ್ರಶಸ್ತಿ ಪುರಸ್ಕøತ ನಟಿ ಜೆನ್ನಿಫರ್ ಲಾರೆನ್ಸ್, ಜ್ಯೂಲಿಯಾ ರಾಬಟ್ರ್ಸ್ ಮತ್ತು “ಫ್ರೆಂಡ್ಸ್” ಚಿತ್ರದ ತಾರೆ ಜೆನ್ನಿಫರ್ ಅನ್ನಿಸ್ಟನ್ ಅವರೊಂದಿಗೆ ದೀಪಿಕಾ ಸ್ಥಾನ ಹಂಚಿಕೊಂಡಿರುವುದು ಹೆಗ್ಗಳಿಕೆಯ ಸಂಗತಿ.

ದೀಪಿಕಾ 10 ದಶಲಕ್ಷ ಡಾಲರ್‍ಗಳ ಸಂಭಾವನೆಯೊಂದಿಗೆ ಫೋಬ್ರ್ಸ್ ಲಿಸ್ಟ್‍ನಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ‘ಬಾಜಿರಾವ್ ಮಸ್ತಾನಿ’ ಮತ್ತು ‘ಪೀಕು’ ಚಿತ್ರದಲ್ಲಿ ಪಡುಕೋಣೆ ‘ಬಾಕ್ಸ್ ಆಫೀಸ್ ಗೋಲ್ಡ್’ ಪ್ರಶಂಸೆ ಗಳಿಸಿದ್ದಾರೆ ಎಂದು ಫೋಬ್ರ್ಸ್ ಹೇಳಿದೆ.   ಟಾಪ್‍ಟೆನ್ ಪಟ್ಟಿಯಲ್ಲಿರುವ ಇತರ ನಟಿಯರೆಂದರೆ ‘ಗೋಸ್ಟ್ ಬಸ್ಟರ್ಸ್’ ಸಿನಿಮಾ ತಾರೆ ಮೆಲಿಸ್ಸಾ ಮ್ಯಾಕ್‍ಕ್ಯಾಥಿ, ‘ದಿ ಹಾರ್ಸ್ ವಿಸ್ಪರ್’ನ ಸ್ಕಾರ್ಲೆಟ್ ಜಾನ್ಸನ್, ಚೀನಿ ನಟಿ ಫಾನ್ ಬಿಂಗ್‍ಬಿಂಗ್ ಹಾಗೂ ಆಸ್ಕರ್ ಪ್ರಶಸ್ತಿಗೆ ನಾಮಿನಿಯಾಗಿದ್ದ ಆಮಿ ಆಡಮ್ಸ್.

► Follow us on –  Facebook / Twitter  / Google+

Facebook Comments

Sri Raghav

Admin