ವಿಶ್ವದ ಲಕ್ಷಾಂತರ ಕ್ರೈಸ್ತರು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಮದರ್ ತೆರೆಸಾಗೆ ಸಂತ ಪದವಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

 

ವ್ಯಾMotjerಟಿಕನ್, ಸೆ.4- ತೀರಾ ಸಾಮಾನ್ಯ ದಾದಿಯಾಗಿ ಬಡವರು, ನಿರ್ಗತಿಕರು ಮತ್ತು ರೋಗಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸಿ ಜಗದ್ವಿಖ್ಯಾತರಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೆಸಾ ಅವರಿಗೆ ಲಕ್ಷಾಂತರ ಕ್ಯಾಥೋಲಿಕ್ ಕ್ರೈಸ್ತರ ಪ್ರಚಂಡ ಕರತಾಡನ ಮತ್ತು ಪ್ರಶಂಸೆಗಳ ಸುರಿಮಳೆಯೊಂದಿಗೆ ಇಂದು ರೋಮ್ನ ವ್ಯಾಟಿಕನ್ನಲ್ಲಿ ಸಂತ ಪದವಿ ಪ್ರದಾನ ಮಾಡಲಾಯಿತು. ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಮದರ್ ಅವರಿಗೆ ಸೇಂಟ್ ಪೀಟರ್ಸ್ರ ಬ್ಯಾಸಿಲಿಕಾದಲ್ಲಿ ಸಂತ ಪದವಿ ಪ್ರದಾನ ಮಾಡಿದರು.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬಡವರು ಮತ್ತು ರೋಗಿಗಳ ಸೇವೆ ಮಾಡುತ್ತಾ ವಿಶ್ವದ ಮನುಕುಲಕ್ಕೆ ಪ್ರೇಮದ ಸಂದೇಶ ಸಾರಿದ ಮದರ್ ತೆರೆಸಾರನ್ನು 20ನೇ ಶತಮಾನದ ಕ್ರೈಸ್ತಧರ್ಮದ ಪೂಜನೀಯ ಸಂತರು ಎಂದು ಘೋಷಿಸಲಾಗಿದೆ.

ವ್ಯಾಟಿಕನ್ ಚರ್ಚ್ನಲ್ಲಿ ತೆರೆಸಾ ಅವರ 19ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಹಸನ್ಮುಖಿ ಮದರ್ ಅವರ ಭಾವಚಿತ್ರಕ್ಕೆ ಕೈಸ್ತ ಧರ್ಮದ ಪ್ರಕಾರ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಸಂಕೀರ್ಣ ಮತ್ತು ದೀರ್ಘ ಪ್ರಕ್ರಿಯೆ ಬಳಿಕ ವ್ಯಾಟಿಕನ್ನ ಕ್ರೈಸ್ತ ಸಂಪ್ರದಾಯದಂತೆ ತೆರೇಸಾ ಅವರ ಹೆಸರನ್ನು ಸಂತ ಪದವಿಗೆ ಘೋಷಿಸಲಾಯಿತು. ಆನಂತರ ವಿಶ್ವದ ಲಕ್ಷಾಂತರ ಅನುಯಾಯಿಗಳು ಮತ್ತು 50ಕ್ಕೂ ಹೆಚ್ಚು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ತೆರೆಸಾ ಅವರಿಗೆ ಈ ಪವಿತ್ರ ಪದವಿಯನ್ನು ಪ್ರದಾನ ಮಾಡಲಾಯಿತು.   ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ 12 ಸದಸ್ಯರ ನಿಯೋಗ ಈ ಸಮಾರಂಭದಲ್ಲಿ ಪಾಲ್ಗೊಂಡರು. ಕೊಲ್ಕತದ ಆರ್ಚ್ಬಿಷಪ್ ಥಾಮಸ್ ಡಿಸೋಜ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ 45 ಆರ್ಚ್ ಬಿಷಪ್ಗಳು ಹಾಗೂ ಸಿಸ್ಟರ್ ಮೇರಿ ಪ್ರೇಮ್ ನೇತೃತ್ವದಲ್ಲಿ 50 ಕ್ರೈಸ್ತ ಸನ್ಯಾಸಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮದರ್ ನಮ್ಮವರು :

ಮದರ್ ತೆರೆಸಾ ಅವರಿಗೆ ಸಂತ ಪದವಿ ನೀಡುವ ಸಂಭ್ರಮದ ನಡುವೆಯೇ ಮದರ್ ನಮ್ಮವರು ಎಂದು ಬಾಲ್ಕನ್ ರಾಷ್ಟ್ರಗಳು ಹಕ್ಕುಪ್ರತಿಪಾದನೆಯನ್ನು ಮಂಡಿಸಿವೆ. ಮೆಸಿಡೋನಿಯಾದಲ್ಲಿ ಮದರ್ ತೆರಸಾ ಅವರು ಜನಿಸಿದ್ದರೂ, ಭಾರತದ ಕೊಲ್ಕತದಲ್ಲಿ 40ಕ್ಕೂ ಹೆಚ್ಚು ವರ್ಷಗಳ ಕಾಲ ಬಡವರು, ರೋಗಿಗಳು ಮತ್ತು ನಿರ್ಗತಿಕರ ಸೇವೆ ಮಾಡುವ ಮೂಲಕ ಲೋಕವಿಖ್ಯಾತರಾಗಿದ್ದರು. ಆದರೆ, ಮೆಸಿಡೋನಿಯಾ ಮತ್ತು ಆಲ್ಬೇನಿಯಾ ದೇಶಗಳು ಮದರ್ ತಮ್ಮ ದೇಶಕ್ಕೆ ಸೇರಿದವರು ಎಂದು ವಾದಿಸುತ್ತಿವೆ.

► Follow us on –  Facebook / Twitter  / Google+

Facebook Comments

Sri Raghav

Admin