ವಿಶ್ವದ ವಿವಿಧೆಡೆ ಹಾರಾಡಿದ ತ್ರಿವರ್ಣ ಧ್ವಜ, ಶುಭಕೋರಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

In-dia

ವಾಷಿಂಗ್ಟನ್/ಬೀಜಿಂಗ್,ಆ.15– ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಇಂದು ಸಡಗರ, ಸಂಭ್ರಮದಿಂದ 70ನೇ ಸ್ವಾತಂತ್ರ್ಯೋತ್ಸವ ಆಚರಿಸಿದರು. ಅಮೆರಿಕ, ಆಸ್ಟ್ರೇಲಿಯಾ, ಚೀನಾ, ಥೈಲೆಂಡ್, ಸಿಂಗಪೂರ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿರುವ ಭಾರತದ ಪ್ರಜೆಗಳು ತ್ರಿವರ್ಣ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ವಂದನೆ ಸಲ್ಲಿಸಿ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮ ಆಚರಿಸಿದರು. ಭಾರತದ ರಾಯಭಾರಿ ಮತ್ತು ರಾಜತಾಂತ್ರಿಕರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನೂರಾರು ಭಾರತೀಯರು ಈ ಸಡಗರದಲ್ಲಿ ಪಾಲ್ಗೊಂಡರು.
ಅಮೆರಿಕ ಶುಭಾಶಯ:
70ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಅಮೆರಿಕ ಭಾರತಕ್ಕೆ ಶುಭ ಸಂದೇಶ ತಿಳಿಸಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸ್ವಾತಂತ್ರ್ಯ ಮತ್ತು ಸಮಾನತೆ ರಕ್ಷಣೆಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಪರವಾಗಿ ವಿದೇಶಾಂಗ ಸಚಿವ ಜಾನ್ ಕೇರ್ರಿ ಹೇಳಿಕೆ ನೀಡಿದ್ದಾರೆ.

Facebook Comments

Sri Raghav

Admin