ವಿಶ್ವದ 8 ಮಹಾಶಕ್ತಿಶಾಲಿ ದೇಶಗಳಲ್ಲಿ ಭಾರತಕ್ಕೆ 6ನೇ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

India-01

ವಾಷಿಂಗ್ಟನ್, ಜ.27-ವಿಶ್ವದ ಎಂಟು ಬೃಹತ್ ಶಕ್ತಿಶಾಲಿ ದೇಶಗಳಲ್ಲಿ ಭಾರತಕ್ಕೆ 6 ನೇ ಸ್ಥಾನಮಾನ ಲಭಿಸಿದೆ. ಆರ್ಥಿಕ ಅಭಿವೃದ್ದಿಗೆ ಸಂಬಂಧಿಸಿದ ಅಮೆರಿಕದ ಅಗ್ರಮಾನ್ಯ ನಿಯತಕಾಲಿಕ ದಿ ಅಮೆರಿಕ ಇಂಟರೆಸ್ಸ್ನಲ್ಲಿ ಈ ಸಂಗತಿಯನ್ನು ತಿಳಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ತನ್ನ ಎದುರಾಳಿ ಮತ್ತು ಪೈಪೆ ನೀಡುಗರು ೀಟಿ ದೇಶಗಳನ್ನು ಹಿಂದಕ್ಕೆ ಸರಿಸಿ ದೊಡ್ಡ ಮಟ್ಟದ ಪ್ರಗತಿಪಥದತ್ತ ಮುನ್ನುಗ್ಗುತ್ತಿದೆ ಎಂದು ನಿಯತಕಾಲಿಕದ ವರದಿ ಹೇಳಿದೆ.

2017 ರ ಜಗತ್ತಿನ ಎಂಟು ಜ ಒಂದು ಗತಿಕ ಶಕ್ತ ರಾಷ್ಟ್ರಗಳ ಪಟ್ಟಿಯನ್ನು ದಿ ಅಮೆರಿಕ ಇಂಟರೆಸ್ಟ್ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಅಮೆರಿಕ ಅಗ್ರಸ್ಥಾನ ಪಡೆದಿದ್ದರೆ, ಚೀನಾ ಮತ್ತು ಜಪಾನ್ ಎರಡನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿವೆ. ರಷ್ಯಾ ಮತ್ತು ಜರ್ಮನಿ ಅನುಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಭಾರತ 6 ನೇ ಶ್ರೇಣಿಯನ್ನು ತನ್ನದಾಗಿಸಿಕೊಂಡಿದ್ದರೆ, ಇರಾನ್ ಮತ್ತು ಇಸ್ರೇಲ್ 7 ಮತ್ತು 8 ನೇ ಸ್ಥಾನದಲ್ಲಿವೆ. ಜ ಒಂದು ಗತಿಕ ಶಕ್ತ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್ ಮುಂಚೂಣಿಯಲ್ಲಿದೆಯಾದರೂ ವಿವಿಧ ಕ್ಷೇತ್ರಗಳಲ್ಲಿ ಅಪರೂಪ ಮತ್ತು ಅಸೂಯೆ ಪಡುವಂಥ ಬೆಳವಣಿಗೆಯನ್ನು ಭಾರತ ಸಾಧಿಸಿದೆ ಎಂದು ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin