ವಿಶ್ವಧರ್ಮ ಪ್ರವಚನ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

6

ಬೆಳಗಾವಿ,ಡಿ.7- ಧಾರವಾಡದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ದ್ವಿತೀಯ ಮಹಿಳಾ ಜಗದ್ಗುರುಗಳಾದ ಶ್ರೀ ಜಗದ್ಗುರು ಮಾತೆ ಗಂಗಾದೇವಿ ತಾಯಿಯವರು ಮತ್ತು ಪೂಜ್ಯ ಶ್ರೀ ಬಸವರತ್ನಾ ಮಾತಾಜಿಯವರ ನೇತೃತ್ವದಲ್ಲಿ ಪ್ರತೀ ವರ್ಷ ಜನವರಿ 11 ರಿಂದ 15ರ ವರೆವಿಗೆ ಧರ್ಮಕ್ಷೇತ್ರ ಕೂಡಲಸಂಗಮದಲ್ಲಿ ನಡೆಯುವ 30ನೇ ಶರಣಮೇಳ ಪ್ರಚಾರಾರ್ಥ, ವಿಶ್ವಧರ್ಮ ಪ್ರವಚನಗಳನ್ನು ನಗರದ ವಿವಿಧ ಪ್ರದೇಶಗಳಲ್ಲಿ ಕೆಳಗಿನಂತೆ ನೀಡಲಿದ್ದಾರೆ.ಇದೇ ಶುಕ್ರವಾರ ಸಂಜೆ 6 ಗಂಟೆಗೆ ಚನ್ನಮ್ಮ ನಗರದ ಬುಡಾ ಸಮುದಾಯ ಭವನದ ಪಕ್ಕದಲ್ಲಿ ಶರಣ ದೀಪಕ್ ಜಮಖಂಡಿ, ಬೆಳಗಾವಿ ನಗರ ಪಾಲಿಕಾ ಸನ್ಮಾನ್ಯ ಸದಸ್ಯರು, ಅಧ್ಯಕ್ಷತೆ ಶರಣ ಶ್ರೀಶೈಲ ಕುರುಬೇಟ್, ಮೇಲ್ದರ್ಜೆ ವಿದ್ಯುತ್ ಗುತ್ತಿಗೆದಾರರು ಭಾಗವಹಿಸುವರು.ಶನಿವಾರ ಸಂಜೆ 6 ಗಂಟೆಗೆ ಶಾಹೂ ನಗರದ ಕನ್ನಡ ಮತ್ತು ಮರಾಠಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶರಣ ಬಸವರಾಜ ಜಗಜಂಪಿ, ಹೆಸರಾಂತ ಸಾಹಿತಿಗಳು ಶರಣೆ ಶಾಂತಾ ಮಂದಾರ ಸಂಕೇಶ್ವರಿ ಭಾಗವಹಿಸುವರು.ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮಹಾಂತೇಶ ನಗರದ (ಗೋಕಾಕ್ ರಸ್ತೆಯ) ವಿಶ್ವಗುರು ಬಸವ ಮಂಟಪದಲ್ಲಿ ಅತಿಥಿಗಳಾಗಿ ಶರಣೆ ಲಲಿತಾ ಎನ್. ಮುದ್ನಾಳ್, ಪುರಸಭೈ ತಹಶೀಲದಾರರು, ಜಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಭಾಗವಹಿಸುವರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin