ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಜಿಮ್‍ಯಾಂಗ್ ಕಿಮ್ ಮರುನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Wo0rld-Bank

ವಾಷಿಂಗ್ಟನ್,ಸೆ.28-ವಿಶ್ವಬ್ಯಾಂಕ್‍ನ ಅಧ್ಯಕ್ಷರಾಗಿ 2ನೇ ಬಾರಿಗೆ ಜಿಮ್‍ಯಾಂಗ್ ಕಿಮ್ ಮುಂದುವರೆಯಲಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಹಿಂದಿನ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆಗಳು, ನಾಯಕತ್ವ ಗುಣ, ವ್ಯವಸ್ಥಾಪಕರ ಕಾರ್ಯ ವೈಖರಿ, ಬ್ಯಾಂಕ್‍ನ ಆಡಳಿತದಲ್ಲಿ ತೆಗೆದುಕೊಂಡಿರುವ ಸ್ಪಷ್ಟ ತೀರ್ಮಾನಗಳು ಸೇರಿದಂತೆ ಹಲವು ಹೊಣೆಯಗಾರಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಜಿಮ್‍ಯಾಂಗ್ ಕಿಮ್ ಅವರನ್ನು ಪುನಃ 2ನೇ ಬಾರಿಗೆ ವಿಶ್ವಬ್ಯಾಂಕ್‍ನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.  ಮೊದಲ ಬಾರಿಗೆ ವಿಶ್ವಬ್ಯಾಂಕ್‍ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬ್ಯಾಂಕ್‍ನ ಸುಧಾರಣೆಗಳಿಗೆ ಒತ್ತು ನೀಡಿ, ಪಾರದರ್ಶಕತೆ ಆಡಳಿತ ನಡೆಸಿದ್ದು, ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದರು.

ವಿಶ್ವಬ್ಯಾಂಕ್‍ನ ಅಧ್ಯಕ್ಷರಾಗಿ 2ನೇ ಬಾರಿಗೆ ಕಿಮ್ ಅವರು 2017 ಜುಲೈ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2012ರಲ್ಲಿ ವಿಶ್ವಬ್ಯಾಂಕ್‍ನ ಮೊದಲನೆ ಹಾಗೂ 12ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin