ವಿಶ್ವವಿಖ್ಯಾತ ಜಂಬೂ ಸವಾರಿ ಸವಾರಿಗೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.29-ಮೈಸೂರು ದಸರಾದ ಆಕರ್ಷಣೆಗಳಲ್ಲಿ ಒಂದಾದ ಜಂಬೂ ಸವಾರಿ ಮೆರವಣಿಗೆ ನಾಳೆ ನಡೆಯಲಿದ್ದು , ಇದಕ್ಕಾಗಿ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ನಾಳೆ ಮಧ್ಯಾಹ್ನ 2.15ಕ್ಕೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಮನೆಯ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಇದಾದ ಬಳಿಕ ಸಂಜೆ 4.45ಕ್ಕೆ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಹೊತ್ತು ತರುವ ಆನೆ ಅರ್ಜುನನಿಗೆ ಮುಖ್ಯಮಂತ್ರಿಗಳಿಂದ ಪುಷ್ರ್ಪಾಣೆ ನಡೆಯಲಿದೆ.

Jamboo-Sawari--02

40 ಸ್ತಬ್ದಚಿತ್ರಗಳು, 36 ಜಾನಪದ ಕಲಾವಿದರ ತಂಡಗಳು , ಆನೆಗಾಡಿ, ಪೊಲೀಸ್ ಬ್ಯಾಂಡ್, ಕೆಎಸ್‍ಆರ್‍ಪಿ ತುಕಡಿ, ಅಗ್ನಿಶಾಮಕ ದಳ, ಅಶ್ವರೋಹಿ ಪಡೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ.  ಮೈಸೂರು ಅರಮನೆಯಿಂದ ಆರಂಭಗೊಳ್ಳುವ ಜಂಬೂಸವಾರಿ ಮೆರವಣಿಗೆ ಬನ್ನಿ ಮಂಟಪದಲ್ಲಿ ಅಂತ್ಯಗೊಳ್ಳಲಿದ್ದು , ಅರಮನೆ ಆವರಣದಲ್ಲಿ ಪಾಸ್ ಹೊಂದಿದವರಿಗೆ ಮಾತ್ರ ಹಾಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಅಂಬಾರಿ ಹೊರುವ ಅರ್ಜುನನಿಗೆ ಪುಷ್ಪಾರ್ಪಣೆ ಮಾಡಲಿದ್ದಾರೆ.

Jamboo-Sawari--04

ಈ ಸಂದರ್ಭದಲ್ಲಿ ಮೈಸೂರು ಅರಸು ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಉಪಸ್ಥಿತರಿರುತ್ತಾರೆ. ಸಂಜೆ 8 ಗಂಟೆಗೆ ಬನ್ನಿ ಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತು ಕಾರ್ಯಕ್ರಮವನ್ನುರಾಜ್ಯಪಾಲ ವಿ.ಆರ್.ವಾಲಾ ಅವರು ವೀಕ್ಷಿಸಲಿದ್ದಾರೆ. ನಂತರ ಗೌರವ ವಂದನೆಯನ್ನು ಸ್ವೀಕರಿಸಲಿದ್ದಾರೆ. ಆ ಮೂಲಕ ಮೈಸೂರು ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.

Jamboo-Sawari--03

Facebook Comments

Sri Raghav

Admin