ವಿಶ್ವವಿಖ್ಯಾತ ಜಗನ್ನಾಥ ರಥ ಯಾತ್ರೆ ಆರಂಭ : ಭಕ್ತರಿಗೆ ಪ್ರಧಾನಿ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

Jagannath
ಅಹಮದಾಬಾದ್, ಜು.12-ಜಗತ್ಪ್ರಸಿದ್ಧ 141ನೇ ಜಗನ್ನಾಥ ರಥ ಯಾತ್ರೆ ಇಂದು ಬೆಳಗ್ಗೆ ಭಾರೀ ಬಂದೋಬಸ್ತ್ ನಡುವೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ಇಂದು ಬೆಳಗ್ಗೆ ಆರಂಭವಾಗಿದೆ. 18 ಕಿ.ಮೀ. ಮಾರ್ಗದಲ್ಲಿ ಸಾಗುವ ಈ ಭವ್ಯ ರಥೋತ್ಸವವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡು ಪುನೀತರಾದರು.
ರಥಗಳು ತೆರಳುವ ಮಾರ್ಗವನ್ನು ಬಂಗಾರದ ಪೊರಕೆ ಬಳಸಿ ಸ್ವಚ್ಚಗೊಳಿಸುವ ಸಾಂಕೇತಿಕ ಕೈಂಕರ್ಯ ಪಹಿಂದ್ ವಿಧಿಯನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ವಿಧ್ಯುಕ್ತವಾಗಿ ನೆರವೇರಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜಗನ್ನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಿದರು. ಜಗನ್ನಾಥ, ಸಹೋದರ ಬಾಲಭದ್ರ ಹಾಗೂ ಸಹೋದರಿ ಸುಭದ್ರಾ ಈ ಮೂರು ರಥಗಳ ಮೆರವಣಿಗೆ ರಥೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು. 18 ಅಲಂಕೃತ ಗಜ ಪಡೆಗಳು 101 ಸ್ತಬ್ಧ ಚಿತ್ರಗಳು, 30 ಧಾರ್ಮಿಕ ಗುಂಪುಗಳ ಸದಸ್ಯರು ಹಾಗೂ 18 ಗಾಯನ ತಂಡಗಳು ಈ ಅದ್ಧೂರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಜಮಾಲ್‍ಪುರ್ ಪ್ರದೇಶದಲ್ಲಿರುವ 400 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯದಲ್ಲಿ ಪ್ರತಿ ವರ್ಷ ನಡೆಯುವ ಈ ರಥೋತ್ಸವ ವಿಶ್ವವಿಖ್ಯಾತ. ಈ ಸಂದರ್ಭದಲ್ಲಿ ಭಕ್ತರಿಗೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಸರ್ವಾಂಗೀಣ ಅಭಿವೃದ್ದಿಗೆ ಜಗದೋದ್ಧಾರಕ ಜಗನ್ನಾಥ ಆಶೀರ್ವದಿಸಲಿ ಎಂದು ಹೇಳಿದರು.

Facebook Comments

Sri Raghav

Admin