ವಿಶ್ವಸಂಸ್ಥೆಗೂ ಡೋಂಟ್ ಕೇರ್ : ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

North-Korea--01

ವಾಷಿಂಗ್ಟನ್,ಮೇ 14- ವಿಶ್ವಸಂಸ್ಥೆ ಭದ್ರತೆ ಮಂಡಳಿಯ ಎಚ್ಚರಿಕೆ ನಡುವೆಯೂ ಉತ್ತರ ಕೊರಿಯಾ ಮತ್ತೊಂದು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿ ಅಮೆರಿಕ ಕೆಂಗಣ್ಣಿಗೆ ಗುರಿಯಾಗಿದೆ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ತನ್ನ ಛಾಳಿ ಮುಂದುವರೆಸಿರುವ ಉತ್ತರ ಕೊರಿಯಾದ ಕ್ರಮಕ್ಕೆ ಜಪಾನ್, ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಆತಂಕಗೊಂಡಿದೆ.   ಬೆಳಗ್ಗೆ 10.30ರ ಸುಮಾರಿಗೆ ಕುಸಾಂಗ್ ಪ್ರದೇಶದಲ್ಲಿ ಉಡಾವಣೆ ಮಾಡಿ ಯಶಸ್ವಿಗೊಳಿಸಿದ್ದು , ಜಪಾನ್ ಸಮುದ್ರದಲ್ಲಿ ಬಿದ್ದಿದೆ. ರಷ್ಯಾ ಹಾಗೂ ಜಪಾನ್ ದೇಶಗಳ ಚಲನವಲನಗಳನ್ನು ಪತ್ತೆ ಹಚ್ಚಿ ಶೀಘ್ರದಲ್ಲೇ ಸಂದೇಶ ರವಾನಿಸುವ ಶಕ್ತಿ ಹೊಂದಿದೆ.ಹೀಗಾಗಿ ಆ ಎರಡು ದೇಶಗಳಿಗೆ ಹೆಚ್ಚು ಅಪಾಯವಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸೀಯನ್ ಸ್ಪೈಸರ್ ತಿಳಿಸಿದ್ದಾರೆ. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಎಚ್ಚರಿಕೆ ಕೊಟ್ಟರೂ ಕ್ಯಾರೆ ಎನ್ನದ ಉತ್ತರ ಕೊರಿಯಾ, ತಾನು ಯುದ್ಧಕ್ಕೆ ಸಿದ್ದ ಎಂಬುದನ್ನು ಪದೇ ಪದೇ ಕ್ಷಿಪಣೆ ಉಡಾಯಿಸಿ ಕೀಟಲೇ ಮಾಡುತ್ತಲೇ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin