ವಿಶ್ವಸಂಸ್ಥೆಗೆ ಅಮೆರಿಕದ ನೂತನ ರಾಯಭಾರಿಯಾಗಿ ಭಾರತೀಯ ಮೂಲದ ನಿಕ್ಕಿ ಹ್ಯಾಲೆ

ಈ ಸುದ್ದಿಯನ್ನು ಶೇರ್ ಮಾಡಿ

Nikky-Haley

ವಾಷಿಂಗ್ಟನ್, ಜ.25- ವಿಶ್ವಸಂಸ್ಥೆಗೆ ಅಮೆರಿಕದ ಮುಂದಿನ ರಾಯಭಾರಿಯಾಗಿ ನಿಕ್ಕಿ ಹ್ಯಾಲೆ ಹೆಸರನ್ನು ಸೆನೆಟ್ ದೃಢಪಡಿಸಿದೆ. ಇದರೊಂದಿಗೆ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಭಾರತೀಯ ಮೂಲದ ಅಮೆರಿಕನ್ ಮಹಿಳೆಗೆ ಸಂಪುಟ ದರ್ಜೆ ಸ್ಥಾನಮಾನ ಲಭಿಸಿದಂತಾಗಿದೆ.  ಸೆನೆಟ್ ವಿದೇಶಿ ಸಂಬಂಧಗಳ ಸಮಿತಿ ಸೌತ್ ಕರೋಲಿನಾ ರಾಜ್ಯಪಾಲೆಯೂ ಆಗಿರುವ ನಿಕ್ಕಿ ಅವರನ್ನು ವಿಶ್ವಸಂಸ್ಥೆಗೆ ಅಮೆರಿಕದ ಹೊಸ ರಾಯಭಾರಿಯನ್ನಾಗಿ ನೇಮಿಸಲು ಅಧಿಕೃತ ಮೊಹರು ಒತ್ತಿದೆ.  ಸೆನೆಟ್‍ನಿಂದ ನಿಕ್ಕಿ ಅವರಿಗೆ 96-4 ಮತಗಳ ಭಾರೀ ಅಂತರದಿಂದ ಸಮ್ಮತಿ ದೊರೆತ್ತಿದ್ದು, ಶೀಘ್ರದಲ್ಲೆ ಅವರು ಪದಗ್ರಹಣ ಮಾಡಲಿದ್ದಾರೆ. ಅಮೆರಿಕ ರಾಜ್ಯವೊಂದಕ್ಕೆ ಭಾರತೀಯ ಮೂಲದ ಪ್ರಥಮ ಮಹಿಳಾ ಗೌರ್ನರ್ ಎಂಬ ಇತಿಹಾಸವನ್ನು ಸೃಷ್ಟಿಸಿರುವ ನಿಕ್ಕಿ ಹ್ಯಾಲೆ ವಿಶ್ವಸಂಸ್ಥೆಗೆ ಸಮಂತಾ ಪವರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin