ವಿಶ್ವಾದ್ಯಂತ ಈ ವರ್ಷ 65 ಪತ್ರಕರ್ತರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

60-Jou

ಪ್ಯಾರಿಸ್, ಡಿ.20-ವಿಶ್ವದ ವಿವಿಧೆಡೆ ಕಳೆದ ವರ್ಷ 65 ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಹತ್ಯೆ ಮಾಡಲಾಗಿದೆ ಎಂದು ರಿಪೋಟರ್ಸ್ ವಿತೌಟ್ ಬಾರ್ಡರ್ಸ್ (ಆರ್‍ಎಸ್‍ಎಫ್) ನಿನ್ನೆ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಯುದ್ಧ, ಹಿಂಸಾಚಾರ ಮತ್ತು ಭಯೋತ್ಪಾದಕರ ದಾಳಿಯಿಂದ ತತ್ತರಿಸಿರುವ ಸಿರಿಯಾ ಈಗಲೂ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಅಲ್ಲಿ 2017ರಲ್ಲಿ 12 ಮಾಧ್ಯಮ ಪ್ರತಿನಿಧಿಗಳನ್ನು ಕೊಲ್ಲಲಾಗಿದೆ. ನಂತರದ ಸ್ಥಾನದಲ್ಲಿ ಮೆಕ್ಸಿಕೊ ಇದ್ದು. ಡ್ರಗ್ಸ್ ದಂಧೆಯ ಕಾರಾಸ್ಥಾನವಾದ ಅಲ್ಲಿ ಈ ವರ್ಷ 11 ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ.

ಈ ವರ್ಷ ಹತ್ಯೆಯಾದ 65 ಪತ್ರಕರ್ತರಲ್ಲಿ 50 ಮಂದಿ ವೃತ್ತಿನಿರತರು. ಮೆಕ್ಸಿಕೋದಲ್ಲಿ ನಡೆಯುತ್ತಿರುವ ವ್ಯವಸ್ಥಿತ ಮಾದಕವಸ್ತು ಜಾಲದ ಬಗ್ಗೆ ತನಿಖಾ ವರದಿ ಪ್ರಕಟಿಸಿದ್ದ ಖ್ಯಾತ ಪತ್ರಕರ್ತ ಕ್ಷೇವಿಯರ್ ವಾಲ್ಟೇಜ್‍ರನ್ನು ಮಾದಕ ಲೋಕದ ಪಾತಕಿಗಳು ಅತ್ಯಂತ ಭೀಕರವಾಗಿ ಕೊಂದು ಹಾಕಿದ್ದರು. ಮೇ ತಿಂಗಳಿನಲ್ಲಿ ನಡೆದ ಈ ಘಟನೆ ಭಾರೀ ಕೋಲಾಹಲ ಸೃಷ್ಟಿಸಿತ್ತು.

Facebook Comments

Sri Raghav

Admin