ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

farmers-suicide

ಚಿಕ್ಕಮಗಳೂರು,ಆ.17- ಭತ್ತದ ಬೆಳೆ ಬಾರದೇ ಇರುವುದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ನರಸಿಂಹರಾಜಪುರ ತಾಲ್ಲೂಕಿನ ಕುಸುಬೂರು ವಾಸಿ ಕೃಷ್ಣ ಪ್ರಸಾದ್(26) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಒಂದು ಎಕರೆ 22 ಗುಂಟೆ ಜಮೀನಿನಲ್ಲಿ ಭತ್ತ ಬೆಳೆಯಲು ಬ್ಯಾಂಕ್‍ನಲ್ಲಿ ಮತ್ತು ಶ್ರೀ ಶಕ್ತಿಗಳಲ್ಲಿ 1.60 ಲಕ್ಷ ಸಾಲ ಮಾಡಿದ್ದರು.

 

ಆದರೆ ಭತ್ತದ ಬೆಳೆ ಬಾರದೆ ಸಾಲವನ್ನು ತೀರಿಸಲಾಗದೆ ನೊಂದಿದ್ದ ಕೃಷ್ಣಪ್ರಸಾದ್ ಆ.9ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೃಷ್ಣಪ್ರಸಾದ್ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ನರಸಿಂಹರಾಜಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin