ವಿಷ ಸೇವಿಸಿ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

farmers

ತುಮಕೂರು, ನ.4- ಬೆಳೆನಷ್ಟದಿಂದ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೌಡಗನಹಳ್ಳಿಯಲ್ಲಿ ನಡೆದಿದೆ.ಹನುಮಂತರಾಯಪ್ಪ (45) ಆತ್ಮಹತ್ಯೆಗೆ ಶರಣಾದ ರೈತ.ಮಳೆ ಇಲ್ಲದೆ ಶೇಂಗಾ, ಜೋಳ, ತೊಗರಿ ಬೆಳೆ ಒಣಗಿ ಹೋಗಿದ್ದವು. ಸುಮಾರು 4 ಲಕ್ಷ ರೂ. ಸಾಲ ಮಾಡಿ ಬೆಳೆ ಬೆಳೆದಿದ್ದ. ಬೆಳೆ ತೆಗೆದು ಸಾಲ ತೀರಿಸುವ ಕನಸು ಕಂಡಿದ್ದ. ಆದರೆ, ಕಣ್ಣೆದುರೇ ಬೆಳೆ ಒಣಗಿದ್ದು ಕಂಡು ಮನನೊಂದು ಕಳೆದ ರಾತ್ರಿ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆಯಷ್ಟೆ ಕೇಂದ್ರ ಬರ ಅಧ್ಯಯನ ತಂಡ ಕೊರಟಗೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೆ ಈ ಘಟನೆ ನಡೆದಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin