ವಿಷ ಸೇವಿಸಿ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

farmers

ಬಳ್ಳಾರಿ, ಸೆ.3- ಸಾಲಬಾಧೆಯಿಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೇಶವರಾಯನ ಬಂಡಿ ಗ್ರಾಮದಲ್ಲಿ ನಡೆದಿದೆ. ಸುಮಾರು ಏಳು ಎಕರೆ ಜಮೀನು ಹೊಂದಿದ್ದ ಕೊಟ್ರಪ್ಪ (55) ಮೃತ ರೈತನಾಗಿದ್ದಾರೆ. ಮುಂಗಾರು ಹಂಗಾಮಿಗೆ ಮುಂಚೆ ತನ್ನ ಹೊಲದಲ್ಲಿ ಬಿತ್ತಿದ್ದ ಬೀಜಗಳು ನೀರಿನ ಕೊರತೆಯಿಂದ ಮೊಳಕೆ ಬಾರದ ಹಿನ್ನೆಲೆಯಲ್ಲಿ ನೊಂದಿದ್ದ ಇವರು ನಂತರ ಆಗುಹೀಗೋ ಮಾಡಿ ಸಾಧಾರಣ ಬೆಳೆ ಬಂದರೂ ಹಾಕಿದ್ದ ಬಂಡವಾಳ ಬಾರz ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಿವಿಧ ಬ್ಯಾಂಕ್ ಹಾಗೂ ಸ್ನೇಹಿತರಿಂದ ಸುಮಾರು ಎಂಟು ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಇವರು ನಿನ್ನೆ ರಾತ್ರಿ ಊಟ ಮಾಡಿ ಜಮೀನಿಗೆ ಹೋಗಿಬರುವುದಾಗಿ ಮನೆಗೆ ಹೇಳಿ ಹೊರಗೆ ಹೋಗಿದ್ದ ಕೊಟ್ರಪ್ಪ ಹೊಲದಲ್ಲಿ ವಿಷ ಕುಡಿದು ಜೀವಬಿಟ್ಟಿದ್ದಾರೆ. ಪ್ರಕರಣ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು , ಗ್ರಾಮಾಂತರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin