ವೀಕೆಂಡ್ ನಲ್ಲಿ ರಿವೀಲ್ ಆಗಲಿದೆ ಸಿಎಂ ಸಿದ್ದರಾಮಯ್ಯನವರ ಲೈಫ್ ಜರ್ನಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--------------

ಬೆಂಗಳೂರು, ಜೂ.22- ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿರುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂಚಿಕೆ ಪ್ರಸಾರಗೊಂಡ ನಂತರ ಅದರ ಬಗ್ಗೆ ಸಾಕಷ್ಟು ಕ್ರೇಜ್ ಹುಟ್ಟಿದೆ. ಈ ವಾರ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರು ಆ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ನೆನಪು, ಹೋರಾಟದ ಬದುಕು, ಅವರ ವಿದ್ಯಾಭ್ಯಾಸ, ಹಳ್ಳಿ ಸೊಗಡಿನ ಜೀವನದ ಸ್ಮರಣೆ, ರಾಜಕೀಯ ಹಾಗೂ ಚಿತ್ರರಂಗದವರ ಒಡನಾಟ ಸೇರಿದಂತೆ ಅನೇಕ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಳ್ಳಲಿದ್ದು ಕಾರ್ಯಕ್ರಮವು ಆಸಕ್ತಿ ಮೂಡಿಸಿದೆ. ಇದೇ ಪ್ರಥಮ ಬಾರಿಗೆ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ವೀಕೆಂಡ್ ವಿತ್ ರಮೇಶ್‍ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರಗಳಂದು ಪ್ರಸಾರವಾಗಲಿದೆ.
ಮಾಜಿ ಪ್ರಧಾನಿ ದೇವೇಗೌಡರು ವೀಕೆಂಡ್ ವಿತ್ ರಮೇಶ್ ಕುರ್ಚಿ ಏರಿದ ಮೇಲೆ ಆ ಕಾರ್ಯಕ್ರಮದ ಟಿಆರ್‍ಪಿ ದಿಢೀರ್ ಹೆಚ್ಚಾದ ಹಿನ್ನೆಲೆಯಲ್ಲಿ ರಮೇಶ್ ಅವರು ರಾಜಕೀಯ ಸಾಧಕರನ್ನು ಈ ಕುರ್ಚಿಗೆ ತರುವ ಪ್ರಯತ್ನ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin