ವೀಕ್ಷಕರ ಗ್ಯಾಲರಿಯಿಂದ ಸದನದೊಳಗೆ ಜಿಗಿಯಲು ಯತ್ನಿಸಿದ ಯುವಕ, ಕೆಲಕಾಲ ಲೋಕಸಭೆಯಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Loksabha-002

ನವದೆಹಲಿ, ನ.25-ಕಲಾಪ ನಡೆಯುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿದ್ದ ಯುವಕನೊಬ್ಬ ಸದನದ ಒಳಗೆ ಜಿಗಿಯಲು ಯತ್ನಿಸಿದ ಕಾರಣ ಕೆಲಕಾಲ ಆತಂಕ ಮತ್ತು ಗೊಂದಲ ಸೃಷ್ಟಿಯಾದ ಘಟನೆ ಇಂದು ಸಂಸತ್ ಅಧಿವೇಶನದ ವೇಳೆ ನಡೆದಿದೆ. ಲೋಕಸಭೆಯಲ್ಲಿ ಇಂದು ಕಲಾಪ ನಡೆಯುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ರಾಕೇಶ್ ಸಿಂಗ್ ಬಗೇಲ್ ಎಂಬಾತ ಹಠಾತ್ತನೆ ತಡೆಗೋಡೆ ಮೂಲಕ ಸದನದ ಒಳಗೆ ಹಾರಲು ಯತ್ನಿಸಿದ. ಇದರಿಂದ ಸಭಾಧ್ಯಕ್ಷರಾದ ಸುಮಿತ್ರಾ ಮಹಾಜನ್ ಸೇರಿದಂತೆ ಸದಸ್ಯರು ಆತಂಕಗೊಂಡರು.  ನಂತರ ಭದ್ರತಾ ಸಿಬ್ಬಂದಿ (ಮಾರ್ಷಲ್‍ಗಳು) ಆತನನ್ನು ವಶಕ್ಕೆ ತೆಗೆದುಕೊಂಡು ಹೊರಗೆ ಕರೆದೊಯ್ದು ವಿಲಕ್ಷಣ ವರ್ತನೆ ಬಗ್ಗೆ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ಸುಮಿತ್ರಾ ಮಹಾಜನ್, ಭದ್ರತಾ ಸಿಬ್ಬಂದಿಯೊಂದಿಗೆ ಚರ್ಚಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin