ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್ ಕುಮಾರ್’ಗೆ ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

Veeranna-Mattikatti-01

ಬೆಂಗಳೂರು, ಏ.4: ನೋಟು ಬದಲಾವಣೆ ದಂಧೆಯಲ್ಲಿ ಸಿಕ್ಕಿಬಿದ್ದು ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಕಾಂಗ್ರೆಸ್ ನಾಯಕ, ಮಾಜಿ ವಿಧಾನಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್ ಕುಮಾರ್ ಗೆ  ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.   ಏಪ್ರಿಲ್ 1ರ ಮಧ್ಯ ರಾತ್ರಿ 9 ಗಂಟೆ ವೇಳೆ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಬೆನ್ಸನ್ ಟೌನ್ ನಲ್ಲಿರುವ ಪ್ರವೀಣ್ ಕುಮಾರ್ ಮನೆ ಮೇಲೆ ದಾಳಿ ನಡೆಸಿ 14 ಜನರನ್ನು ಬಂಧಿಸಿದ್ದರು. ಜತೆಗೆ 9.14 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದರು. ಪ್ರವೀಣ್ ಕುಮಾರ್ ರನ್ನು ಜಾಮೀನಿನ ಮೇಲೆ ಇಂದು ಬಿಡುಗಡೆ ಮಾಡಲಾಗಿದೆ.

ತನಿಖೆಯ ವೇಳೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಕಮಿಷನ್ ವಿಚಾರದಲ್ಲಿ ಚೌಕಾಸಿ ಮಾಡಲು ಹೋಗಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಕಡಿಮೆ ಕಮಿಷನ್‌ಗೆ ಹಣ ಬದಲಾವಣೆ ಮಾಡಿಕೊಳ್ಳಲು ಆರೋಪಿಗಳು ಚೌಕಾಸಿ ನಡೆಸುತ್ತಿದ್ದರು. ಆರ್‌‌ಬಿಐನಲ್ಲಿ ಹಳೆಯ ನೋಟುಗಳನ್ನು ಮಾ.31ರ ವರೆಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದ್ದ ಹಿನ್ನೆಲೆಯಲ್ಲಿ ಕೆಲವು ಆರ್‌‌ಬಿಐ ಅಧಿಕಾರಿಗಳ ಜೊತೆ ಆರೋಪಿಗಳು ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin