ವೀರಯೋಧರ ಆದರ್ಶ ಯುವ ಪೀಳಿಗೆಗೆ ಮಾದರಿ

ಈ ಸುದ್ದಿಯನ್ನು ಶೇರ್ ಮಾಡಿ

channapatana

ಚನ್ನಪಟ್ಟಣ, ಅ.22- ಕುಟುಂಬದಿಂದ ದೂರವಿದ್ದು ಮಳೆ-ಚಳಿ ಬಿಸಿಲು ಎನ್ನದೆ ಹಗಲಿರುಳು ದೇಶ ರಕ್ಷಣೆಯಲ್ಲಿ ತೊಡಗುವ ವೀರಯೋಧರ ಆದರ್ಶ ತತ್ವಗಳು ಇಂದಿನ ಯುವ ಪೀಳಿಗೆಗೆ ಅವಶ್ಯಕ ಎಂದು ಅಕ್ಕೂರು ಠಾಣೆಯ ಪಿಎಸ್‍ಐ ಸದಾನಂದ ಅಭಿಪ್ರಾಯ ವ್ಯಕ್ತಪಡಿಸಿದರು. ಹನಿಯೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಪೊಲೀಸರ ಹುತಾತ್ಮರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಯೋಧ ಸೋಮೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಲ್ಲಿ ಜನಿಸಿ ದೇಶಸೇವೆಗಾಗಿ ಸೈನ್ಯಕ್ಕೆ ಸೇರಿದ ಸೋಮೇಗೌಡರವರು ಶತ್ರು ದೇಶದವರ ದಾಳಿ ವೇಳೆ ದೇಶ ರಕ್ಷಣೆ ಮಾಡಿದ ಕೀರ್ತಿ ಅವರದಾಗಿದೆ ಎಂದು ಗುಣಗಾನ ಮಾಡಿದರು.

2014ರಲ್ಲಿ ವೀರಮರಣವನ್ನು ಹೊಂದಿದ ಇವರಿಂದ ಹನಿಯೂರು ಗ್ರಾಮದ ಭಾರತದ ಭೂಪಟದಲ್ಲಿ ಗುರುತಿಸುವಂತೆ ವೀರಯೋಧನನ್ನು ಹೊಂದಿರುವುದು ಸಾಮಾನ್ಯವೇನಲ್ಲ ಎಂದರು.ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಿನಾಥ್ ಮಾತನಾಡಿ, ವೀರಯೋಧ ಸೋಮೇಗೌಡರ ಸಾವು ಸಾವಲ್ಲ ಅದು ಒಂದು ತ್ಯಾಗ ಎಂದು ಬಣ್ಣಿಸಿದ ಅವರು ಹುತಾತ್ಮರ ಪತ್ನಿ ಹಾಗೂ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಶಾಲೆಯ ವಿದ್ಯಾರ್ಥಿಗಳಿಗೆ ಹಲವಾರು ಮಾಹಿತಿಯನ್ನು ನೀಡಿದರು.ಸಿಂಗರಾಜಿಪುರದ ಕೃಷ್ಣೇಗೌಡ ಶಾಲೆಯ ಮುಖ್ಯೋಪಾಧ್ಯಾಯ ಅಪ್ಪಾಜಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವಿ ಹಾಗೂ ಹಲವಾರು ಮುಖಂಡರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin