ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ನಡೆಯನ್ನು ತೀವ್ರವಾಗಿ ಖಂಡಿಸಿದ ಸಿದ್ದಗಂಗಾ ಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

Siddaganga--02

ತುಮಕೂರು, ಡಿ.29- ಸಮಾಜವನ್ನು ಇಬ್ಬಾಗ ಮಾಡುತ್ತಿರುವವರಿಗೆ ಸಮಾಜದ ಬಗ್ಗೆ ಕಾಳಜಿ ಇರುವುದಿಲ್ಲ ಎಂದು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ನಡೆಯನ್ನು ತುಮಕೂರು ಸಿದ್ದಗಂಗಾ ಶ್ರೀಗಳು ತೀವ್ರವಾಗಿ ಖಂಡಿಸಿದ್ದಾರೆ. ನಿನ್ನೆ ಸಿದ್ದಗಂಗಾಮಠಕ್ಕೆ ಭೇಟಿ ನೀಡಿದ ಶ್ರೀ ಶೈಲ ಜಗದ್ಗುರು ಡಾ.ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು ಪ್ರತ್ಯೇಕ ಧರ್ಮದ ಬಗ್ಗೆ ಸಿದ್ದಗಂಗೆಯ ಶತಾಯುಷಿ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಧರ್ಮ ಹಿಬ್ಬಾಗ ಮಾಡುತ್ತಿರುವುದು ಸೂಕ್ತವಲ್ಲ. ಅವರು ಹೀಗೆ ಮಾಡುತ್ತಿರುವುದು ಸರಿಯಲ್ಲ ಎಂದು ನೋವು ತೋಡಿಕೊಂಡರು ಎಂದು ಹೇಳಿದರು. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳು ಬಹಳ ನೋವಿನಲ್ಲಿದ್ದಾರೆ. ಧರ್ಮದ ವಿಚಾರದಲ್ಲಿ ಇತ್ತೀಚಿನ ವಿದ್ಯಮಾನಗಳು ತೀವ್ರ ಬೇಸರ ತರಿಸಿವೆ ಎಂದು ತಿಳಿಸಿದರು.  ಒಂದು ಕಾಲಕ್ಕೆ ಶ್ರೀಗಳೇ ಸುಪ್ರೀಂಕೋರ್ಟ್ ಎಂದು ಪ್ರತ್ಯೇಕತಾವಾದಿಗಳು ಬಣ್ಣಿಸಿದ್ದರು. ಅವರ ಬಗ್ಗೆಯೇ ಅಸಭ್ಯವಾಗಿ ಕೆಲವರು ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಪ್ರತ್ಯೇಕ ಧರ್ಮವಾಗಬಾರದು ಎಂಬುದು ಸ್ವಾಮೀಜಿಯವರ ನಿಲುವಾಗಿದೆ. ಪ್ರತ್ಯೇಕ ಧರ್ಮ ಇಲ್ಲಿಗೆ ಕೈ ಬಿಡಬೇಕು. ಅವರು ಹೋಗುತ್ತಿರುವ ವೇಗ ನೋಡಿದರೆ ಏನೆಂಬುದು ಗೊತ್ತಾಗುತ್ತದೆ. ಅವರ ನಡೆ ಸರಿಯಿಲ್ಲ ಎಂದು ಶ್ರೀಗಳು ಹೇಳಿದರು.

Facebook Comments

Sri Raghav

Admin