ವೀರಶೈವ-ಲಿಂಗಾಯತ ಬೇಡ ಬಸವ ಧರ್ಮ ಘೋಷಣೆಯಾಗಲಿ

ಈ ಸುದ್ದಿಯನ್ನು ಶೇರ್ ಮಾಡಿ

Shankar-Munavalli

ಬೆಂಗಳೂರು, ಸೆ.19- ಶೋಷಿತ ಶರಣ ಸಮುದಾಯಗಳ ಹಿತದೃಷ್ಟಿಯಿಂದ ವೀರಶೈವ-ಲಿಂಗಾಯತ ಧರ್ಮದ ಬದಲು ಬಸವಧರ್ಮ ಘೋಷಣೆಯಾಗಲಿ ಎಂದು ಬಸವಧರ್ಮ ಪ್ರತಿಪಾದಕ ಸಂಘಟನೆ ಸಂಚಾಲಕ ಶಂಕರ ಮುನವಳ್ಳಿ ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಜಾತಿಯಲ್ಲಿರುವ ಹಿಂದುಳಿದ ಶರಣರ ಜಾತಿಗಳಾದ ಅಂಬಿಗರು, ಮಡಿವಾಳರು, ನೇಕಾರರು, ಬಣಗಾರರು, ಮಾಳಿ, ಉಪ್ಪಾರ, ಕುಂಬಾರ, ಕಂಬಾರ, ಗೌಳಿ ಹೀಗೆ ಹಲವು ಶರಣರ ಸಮುದಾಯಗಳು ಮತ್ತು ಹಲವಾರು ಶೋಷಿತ ಸಮುದಾಯದ ಶರಣರ ಡೋಹರ, ಕಕ್ಕಯ್ಯ ಸಮಗಾರ ಹರಳಯ್ಯ, ಮಾದಿಗರ ಚನ್ನಯ್ಯ, ಛಲವಾದಿ ಮಾಹರ, ಮೋಚಿ ಹೀಗೆ ಹಲವಾರು ಹಿಂದುಳಿದ ಶರಣರ ಮತ್ತು ಶೋಷಿತರ ಈ ಉಪಶರಣರ ಶೊಷಿತ ಸಮುದಾಯಗಳು ವೀರಶೈವ-ಲಿಂಗಾಯತ ಧರ್ಮದ ಘೋಷಣೆಯಾದರೆ ಧರ್ಮದಿಂದ ದೂರ ಉಳಿಯುತ್ತವೆ ಎಂದು ಹೇಳಿದರು.

ಈ ಕಾರಣದಿಂದ ವೀರಶೈವ ಮತ್ತು ಲಿಂಗಾಯತ ಮಹಾಸಭಾ ಕೂಡಲೇ ನಿರ್ಣಯ ಪರಿಶೀಲಿಸಿ ಬಸವಧರ್ಮ ಎಂದು ಘೋಷಣೆ ಮಾಡಿದಲ್ಲಿ ಎಲ್ಲರೂ ಒಂದುಗೂಡಲು ಸಾಧ್ಯ ಎಂದು ತಿಳಿಸಿದರು. ಲಿಂಗಾಯತರಲ್ಲಿ ಕೇವಲ ಶೇ.10ರಷ್ಟು ಶ್ರೀಮಂತರಿರುತ್ತಾರೆ. ಉಳಿದ ಶೇ.90ರಷ್ಟು ಮಂದಿ ಶೈಕ್ಷಣಿಕ, ಆರ್ಥಿಕ ಮತ್ತು ಮೂಲ ಸೌಕರ್ಯ ಹಾಗೂ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.  ಇವರಿಗೆ ಶೇ.20ರಷ್ಟು ಮೀಸಲಾತಿಯ ಅವಶ್ಯಕತೆಯಿದೆ. ನಮಗೆ ಧರ್ಮ ಆಚರಣೆಗಾಗಿ ಬಸವಧರ್ಮ ಘೋಷಣೆ ಮಾಡಿ ಎಂದು ಶಂಕರ ಮುನವಳ್ಳಿ ಮನವಿ ಮಾಡಿದರು.

Facebook Comments

Sri Raghav

Admin