ವೀರಶೈವ-ಲಿಂಗಾಯತ ವಿವಾದದಲ್ಲಿ ಸಿದ್ಧಗಂಗಾ ಶ್ರೀಗಳ ಹೇಳಿಕೆಯೇ ಅಂತಿಮ

ಈ ಸುದ್ದಿಯನ್ನು ಶೇರ್ ಮಾಡಿ

Eshwar-Khandre--01

ಬೆಂಗಳೂರು, ಸೆ.14- ವೀರಶೈವ ಮತ್ತು ಲಿಂಗಾಯತ ವಿಷಯದಲ್ಲಿ ಸಿದ್ಧಗಂಗಾ ಮಠದ ಶ್ರೀಗಳ ಹೇಳಿಕೆಯೇ ಅಂತಿಮ. ಅದಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಸ್ಪಷ್ಪಪಡಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳನ್ನು ಅನಗತ್ಯವಾಗಿ ವಿವಾದಕ್ಕೆ ಎಳೆಯುವುದು ಮಹಾ ಅಪರಾಧ. ಯಾರೇ ಆಗಲಿ ಶ್ರೀಗಳನ್ನು ವಿವಾದಕ್ಕೆ ಗುರಿ ಮಾಡಬೇಡಿ. ವೀರಶೈವ ಲಿಂಗಾಯತ ಸಮುದಾಯಗಳಿಗೆ ಶ್ರೀಗಳು ಸೀಮಿತರಲ್ಲ. ಎಲ್ಲ ಧರ್ಮ, ಜಾತಿ-ಸಮುದಾಯಗಳಿಗೂ ಶ್ರೀಗಳು ಪೂಜ್ಯರಾಗಿದ್ದಾರೆ. ನಡೆದಾಡುವ ದೇವರ ಹೆಸರಿನಲ್ಲಿ ವಿವಾದ ಸೃಷ್ಟಿಸುವುದು ತಪ್ಪು ಎಂದು ಸಚಿವ ಎಂ.ಬಿ.ಪಾಟೀಲ್ ಹಾಗೂ ಮಾತೆ ಮಹದೇವಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರು.

ನಿನ್ನೆ ನಡೆದ ವೀರಶೈವ ಲಿಂಗಾಯತ ಒಕ್ಕೂಟದ ಜಂಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಇನ್ನು ಮುಂದೆ ಯಾರೂ ವೈಯಕ್ತಿಕ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಬೇಡಿ. ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಒಂದಾಗಿ ಹೋಗಬೇಕು. ಇದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ವೀರಶೈವ-ಲಿಂಗಾಯತ ಒಂದೇ ಎಂಬುದು ನಮ್ಮ ಅಭಿಪ್ರಾಯ. ಪ್ರತ್ಯೇಕ ಧರ್ಮ ಕೇಳುವ ವಿಷಯದಲ್ಲಿ ಲಿಂಗಾಯತ ಎಂದು ಪ್ರತಿಪಾದಿಸಲಾಗುತ್ತಿದೆ. ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಮೊದಲು ಪ್ರಸ್ತಾಪಿಸಿದ್ದು ವೀರಶೈವ ಮಹಾಸಭಾ. ಹಾಗಾಗಿ ಲಿಂಗಾಯತ ಎಂಬ ಸೀಮಿತ ಹೇಳಿಕೆ ನೀಡುವವರಿಗೆ ಮನವರಿಕೆ ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ. ಆ ಮೂಲಕ ಎಲ್ಲರೂ ಒಟ್ಟಾಗಿ ಹೋಗುವಂತೆಯೂ ಕೂಡ ಮಾತುಕತೆ ನಡೆದಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

Facebook Comments

Sri Raghav

Admin