‘ವೀರಶೈವ-ಲಿಂಗಾಯಿತರಿಗೆ 100 ಟಿಕೆಟ್‍ ಕೊಡಿ’

ಈ ಸುದ್ದಿಯನ್ನು ಶೇರ್ ಮಾಡಿ

Lingayata--011

ಬೆಂಗಳೂರು, ಮಾ.28- ರಾಜಕೀಯದಲ್ಲಿ ವೀರಶೈವ-ಲಿಂಗಾಯಿತ ಪ್ರಾತಿನಿಧ್ಯ ಹೆಚ್ಚಳಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇತರೆ ಪಕ್ಷಗಳು ಕನಿಷ್ಠ 100 ಟಿಕೆಟ್‍ಗಳನ್ನು ವೀರಶೈವ-ಲಿಂಗಾಯಿತ ರಾಜಕೀಯ ನಾಯಕರಿಗೆ ನೀಡಬೇಕೆದು ವೀರಶೈವ ಲಿಂಗಾಯಿತ ಯುವ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಆರ್.ಮಹೇಶ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯಿತ ಸಮುದಾಯವು ಬಹಳ ಹಿಂದಿನಿಂದಲೂ ಕರ್ನಾಟಕದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸುತ್ತಾ ಬಂದಿದೆ. ಬಹುದೊಡ್ಡ ಸಮಾಜವಾದ ವೀರಶೈವ-ಲಿಂಗಾಯಿತ ಸಮುದಾಯದ ಪ್ರಾತಿನಿಧ್ಯ ಕರ್ನಾಟಕ ವಿಧಾನಸಭಾ ಮತ್ತು ವಿಧಾನಪರಿಷತ್‍ನಲ್ಲಿ ಗಣನೀಯವಾಗಿ ಮತ್ತು ಶೋಚನೀಯವಾಗಿ ಕಡಿಮೆಯಾಗುತ್ತಾ ಬಂದಿರುವುದು ಸಮಾಜದ ಯುವಕರಲ್ಲಿ ಮತ್ತು ಹದಿಹರೆಯದವರಲ್ಲಿ ಅಸಮಾಧಾನ ಉಂಟು ಮಾಡಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 90 ಶಾಸಕರು ಲಿಂಗಾಯಿತ ಸಮುದಾಯದಿಂದ ಚುನಾಯಿತವಾಗಿದ್ದ ಸಂದರ್ಭವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡಾಗ ಸಮಾಜದ ರಾಜಕೀಯ ಬಲಾಢ್ಯತೆಯ ಅರಿವು ಉಂಟಾಗ್ತುದೆ.

ಆದರೆ, ಇತ್ತೀಚೆಗೆ ನಮ್ಮ ಸಮುದಾಯದ ಶಾಸಕರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಬಹುಸಂಖ್ಯಾತರಿರುವ ಲಿಂಗಾಯಿತ ಕ್ಷೇತ್ರಕ್ಕೆ ಎಲ್ಲ ಪಕ್ಷಗಳು ಸೇರಿದಂತೆ ಸರಿಯಾದ ಪ್ರಾತಿನಿಧ್ಯ ನೀಡದೇ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವುದು ಎಲ್ಲ ರಾಜಕೀಯ ಪಕ್ಷಗಳ ವಿರುದ್ಧ ಸಿಡಿದೇಳಲು ಸೂಚನೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ಕನಿಷ್ಠ ಪ್ರತಿಯೊಂದು ಪಕ್ಷದಿಂದ 100 ರಾಜಕೀಯ ನಾಯಕರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದರು. ಈ ಮನವಿಯನ್ನು ಲಘುವಾಗಿ ಪರಿಗಣಿಸದೇ ಲಿಂಗಾಯಿತ ಸಮುದಾಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿ ಇದುವರೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ವೀರಶೈವ-ಲಿಂಗಾಯಿತ ಯುವ ಬ್ರಿಗೇಡ್ ಒತ್ತಾಯಿಸಿದೆ.

Facebook Comments

Sri Raghav

Admin