ವೃದ್ಧೆಗೆ ವಂಚಿಸಿ 2.5 ಲಕ್ಷ ಚಿನ್ನಾಭರಣ ದೋಚಿದ ಕಳ್ಳ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ನ.29-ಮೊಮ್ಮಗನಿಗೆ ಅಪಘಾತವಾಗಿದೆ ಆಸ್ಪತ್ರೆಗೆ ಬನ್ನಿ ಎಂದು ಸುಳ್ಳು ಹೇಳಿ ವೃದ್ಧೆಯೊಬ್ಬರನ್ನು ವ್ಯಾನಿನಲ್ಲಿ ಕರೆದುಕೊಂಡು ಹೋಗಿ 2.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪಟ್ಟಣದ ಚನ್ನಕೇಶವ ದೇವಾಲಯದ ರಸ್ತೆಯ ನಿವಾಸಿ ವಿಜಯಲಕ್ಷ್ಮೀ(70) ಚಿನ್ನಾಭರಣ ಕಳೆದುಕೊಂಡ ವೃದ್ಧೆ.ಗಾಯತ್ರಿ ಸೊಸೈಟಿಯಲ್ಲಿ ಹಣಕಾಸು ವ್ಯವಹಾರ ಮುಗಿಸಿ ಹೊರಗೆ ಬಂದು ಆಟೋಗಾಗಿ ಕಾಯುತ್ತ ನಿಂತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಬಂದು ನಿಮ್ಮ ಮೊಮ್ಮಗ ವಿಶ್ವನಿಗೆ ಬೆಳಗ್ಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ಸೇರಿಸಿದ್ದಾರೆ ಬೇಗ ಬನ್ನಿ ಎಂದು ಹೇಳಿದ್ದಾನೆ. ಇದರಿಂದ ಗಾಬರಿಗೊಂಡು ಅವರು ಆತ ತಂದಿದ್ದ ಮಾರುತಿ ವ್ಯಾನ್ ಏರಿದ್ದಾರೆ. ನಂತರ ಬಿಕ್ಕೋಡು ರಸ್ತೆಯಲ್ಲಿ ಚಲಿಸಿದ ವ್ಯಾನ್ ತಾಲೂಕಿನ ತಗರೆ ಅರಣ್ಯ ಪ್ರದೇಶದಲ್ಲಿ ವ್ಯಾನನ್ನು ನಿಲ್ಲಿಸಿ ವಿಜಯಲಕ್ಷ್ಮಿ ಅವರನ್ನು ಬೆದರಿಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ. ಈ ಸಂಬಂಧ ಬೇಲೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin